ಬಿಸಲಕೊಪ್ಪ, ಎಕ್ಕಂಬಿಯಲ್ಲಿ ಕಾಡಾನೆಗಳ ಹಿಂಡು ಸುತ್ತಾಟ; ಆತಂಕದಲ್ಲಿ ಜನರು

ಹೊಸದಿಗಂತ ವರದಿ, ಬನವಾಸಿ
ಬನವಾಸಿ ಅರಣ್ಯ ವಲಯ ವ್ಯಾಪ್ತಿಯ ಬಿಸಲಕೊಪ್ಪ ಗ್ರಾಮ ಪಂಚಾಯತಿಯ ಬಿಸಲಕೊಪ್ಪ ಮತ್ತು ಎಕ್ಕಂಬಿಯಲ್ಲಿ ಆನೆಗಳ ಹಿಂಡು ಕಂಡುಬಂದಿದ್ದು ಇಲ್ಲಿನ ಅರಣ್ಯ ಪ್ರದೇಶ ಮತ್ತು ಗ್ರಾಮೀಣ ಭಾಗದ ರಸ್ತೆಗಳಲ್ಲಿ ಸುತ್ತಾಟ ನಡೆಸುತ್ತಿದೆ. ನಾಲ್ಕು ಆನೆಗಳಲ್ಲಿ ಒಂದು ಗಂಡು, ಎರಡು ಹೆಣ್ಣು ಮತ್ತು ಒಂದು ಮರಿಯಾನೆಗಳಿವೆ. ಡಿಸಿಎಫ್ ಎಸ್.ಜಿ ಹೆಗಡೆ ಹಾಗೂ ಎಸಿಎಫ್ ಅಶೋಕ ಅಲಗೂರ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಉಷಾ ಕಬ್ಬೇರ ಹಾಗೂ ಅರಣ್ಯ ಸಿಬ್ಬಂದಿ ಗಸ್ತಿನಲ್ಲಿದ್ದು ರೈತರಿಗೆ ಮತ್ತು ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ. ಆನೆಗಳಿಂದ ಯಾವುದೇ ಕೃಷಿ ಹಾನಿಯಾದ ಬಗ್ಗೆ ವರದಿಯಾಗಿರುವುದಿಲ್ಲ. ಆದರೂ ಆನೆಗಳ ಸುತ್ತಾಟದಿಂದ ಸಾರ್ಜನಕರು, ರೈತರಲ್ಲಿ ಆತಂಕ ಮನೆಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!