ಬಿಟ್ ಕಾಯಿನ್ ಪ್ರಕರಣ: ತನಿಖೆಗೆ CID ಅಡಿಯಲ್ಲಿ SIT ತಂಡ ರಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಿಟ್ ಕಾಯಿನ್ ಪ್ರಕರಣವನ್ನು ( Bit Coin Scam ) ಮರು ತನಿಖೆ ನಡೆಸುವುದಾಗಿ ರಾಜ್ಯ ಸರಕಾರ ಘೋಷಣೆ ಮಾಡಿತ್ತು. ಈ ಬೆನ್ನಲ್ಲೇ ಸಿಐಡಿಯ ಅಡಿಯಲ್ಲಿ ಒಂದು ವಿಶೇಷ ತನಿಖಾ ತಂಡವನ್ನು ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಈ ಸಂಬಂಧ ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು, ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಬಿಟ್ ಕಾಯಿನ್ ಪ್ರಕರಣದ ತನಿಖೆಯನ್ನು ದಿನಾಂಕ 30-06-2023ರನ್ವಯ ಸಿಐಟಿ ತನಿಖೆಗೆ ವಹಿಸಿ ಆದೇಶಿಸಲಾಗಿದೆ .

ಈ ಪ್ರಕರಣದಲ್ಲಿ ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಜಾಲಗಳು ಭಾಗಿಯಾಗಿರುವ ಸಾಧ್ಯತೆ ಇದ್ದು, ಕೃತ್ಯದ ಆರೋಪಿಗಳು ಸೈಬರ್ ವಿಷಯಗಳ ಪರಿಣಿತರಾಗಿದ್ದು, ಬಿಟ್ ಕಾಯಿನ್ ಗಳ ಮತ್ತು ಡಾರ್ಕ್ ನೆಟ್ ಗಳಲ್ಲಿ ವ್ಯವಹಾರ ಮಾಡಿರುವ ಮಾಹಿತಿಗಳಿವೆ ಎಂದು ಹೇಳಿದ್ದಾರೆ.

ಈತನಿಖೆಯನ್ನು ಕೈಗೊಳ್ಳಲು ಹೆಚ್ಚಿನ ತಾಂತ್ರಿಕ ಪರಿಣಿತಿ ಇರುವ ವಿಶೇಷ ತನಿಖಾ ತಂಡದ ಅವಶ್ಯಕತೆ ಇರುವುದರಿಂದ, ರಾಜ್ಯದ ವಿಶೇಷ ತನಿಖಾ ಸಂಸ್ಥೆಯಾದ ಸಿಐಡಿಯ ಅಡಿಯಲ್ಲಿ ಒಂದು ವಿಶೇಷ ತನಿಖಾ ತಂಡ(SIT) ರಚಿಸಿ ಆದೇಶಿಸಿದ್ದಾರೆ.

ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥರನ್ನಾಗಿ ಬೆಂಗಳೂರಿನ ಅಪರಾಧಗಳ ವಿಭಾಗದ ಎಡಿಜಿಪಿ ಮನೀಶ್ ಖರ್ಭೀಕರ್ ಅವರನ್ನು ನೇಮಿಸಿದೆ. ಸದಸ್ಯರನ್ನಾಗಿ ಆರ್ಥಿಕ ಅಪರಾಧಗಳ ಡಿಐಜಿ ಡಾ.ಕೆ ವಂಶಿ ಕೃಷ್ಣ, ಆಡಳಿತ ವಿಭಾಗದ ಡಿಸಿಪಿ ಡಾ.ಅನೂಪ್ ಎ ಶೆಟ್ಟಿ ಹಾಗೂ ಪೊಲೀಸ್ ಅಧೀಕ್ಷಕರು, ಆರ್ಥಿಕ ಅಪರಾಧಗಳ ವಿಭಾಗ ಮತ್ತು ಸೈಬರ್ ಪರಾಧಗಳ ಸಿಐಟಿ ಶರತ್ ಅವರನ್ನು ನೇಮಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!