ಬಿಟ್​ ಕಾಯಿನ್ ಹಗರಣ ಪ್ರಕರಣ: ಎಸ್​ಐಟಿಯಿಂದ ಐಪಿಎಸ್​​ ಅಧಿಕಾರಿ ಸಂದೀಪ್ ಪಾಟೀಲ್ ವಿಚಾರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಟ್​ ಕಾಯಿನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್​​ ಅಧಿಕಾರಿ ಸಂದೀಪ್ ಪಾಟೀಲ್ (Sandeep Patil) ಅವರನ್ನು ಇಂದು ಎಸ್​ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಇಂದು ಮಧ್ಯಾಹ್ನ 3.30ರ ಸುಮಾರಿಗೆ ವಿಚಾರಣೆಗಾಗಿ ಸಿಐಡಿ ಕಚೇರಿಗೆ ಹಾಜರಾಗಿದ್ದ ಸಂದೀಪ್ ಪಾಟೀಲ್​, ಬಿಟ್​ ಕಾಯಿನ್ ಹಗರಣ ಕೇಸ್ ಸಂಬಂಧ ಮಾಹಿತಿ ನೀಡಿ ವಾಪಸ್​ ತೆರಳಿದ್ದಾರೆ.

ಸಂದೀಪ್ ಪಾಟೀಲ್ ಸಿಸಿಬಿ ಜಂಟಿ ಆಯುಕ್ತರಾಗಿದ್ದಾಗ ಕೇಸ್ ದಾಖಲಾಗಿತ್ತು. ಬಿಟ್ ಕಾಯಿನ್ ಪ್ರಕರಣದ ಹೆಚ್ಚಿನ ತನಿಖೆಯನ್ನು ಸಿಐಡಿ ಎಸ್​​ಐಟಿ ನಡೆಸುತ್ತಿದ್ದು, ತನಿಖೆಯ ಭಾಗವಾಗಿ ಸಂದೀಪ್ ಪಾಟೀಲ್ ವಿಚಾರಣೆಯನ್ನು ಇಂದು ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!