January22, 2026
Thursday, January 22, 2026
spot_img

ಕೊಡಗಿನಲ್ಲಿ ಮೈಕೊರೆಯುವ ಚಳಿ: ಸ್ವೆಟರ್‌, ಕಂಬಳಿಗಳಿಗೆ ಭರ್ಜರಿ ಡಿಮ್ಯಾಂಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಜನರಿಗೆ ಚಳಿಯ ವಿಪರೀತ ಅನುಭವ ಉಂಟಾಗುತ್ತಿದೆ. ಜೊತೆಗೆ ಗಾಳಿ, ಆಗಾಗ್ಗೆ ತುಂತುರು ಮಳೆ ಮೈನಡುಗುವಂತೆ ಮಾಡುತ್ತಿದೆ.

ಕೊಡಗಿನಲ್ಲಿ ಮೈಕೊರೆಯುವ ಚಳಿಯಿಂದಾಗಿ ಬಹುತೇಕ ಜನ ನಿತ್ಯ ಕೆಲಸಗಳಿಗೆ ತೆರಳಲು ಹರಸಾಹಸ ಪಡುತ್ತಿದ್ದಾರೆ. ಸ್ವೆಟರ್‌, ಕಂಬಳಿ ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ. ಇದನ್ನೇ ಸದುಪಯೋಗ ಪಡಿಸಿಕೊಳ್ಳುತ್ತಿರುವ ಕೆಲ ವ್ಯಾಪಾರಿಗಳು ದುಬಾರಿ ಬೆಲೆಗೆ ಮಾರಿ ಆದಾಯ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಮಂಜಿನ ನಗರಿ ಮಡಿಕೇರಿಯಲ್ಲಿ ಸಾಮಾನ್ಯವಾಗಿ ಡಿಸೆಂಬರ್‌ ತಿಂಗಳ ಮಧ್ಯದಲ್ಲಿ ಚಳಿ ಆವರಿಸಲಿದ್ದು, ಫೆಬ್ರವರಿ ಮಧ್ಯದ ವರೆಗೆ ಮುಂದುವರಿಯುತ್ತದೆ. ಆದ್ರೆ ಈ ಬಾರಿ ನವೆಂಬರ್‌ ಅಂತ್ಯದಿಂದಲೇ ಮೈಕೊರೆವ ಚಳಿಯ ವಾತಾವರಣ ಆರಂಭವಾಗಿದೆ. ಈ ಬಾರಿ ತಾಪಮಾನ ಮಡಿಕೇರಿಯಲ್ಲಿ ಕನಿಷ್ಠ ತಾಪಮಾನ 11 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹೀಗಾಗಿ ಬೆಳಗ್ಗೆ ವಾಕಿಂಗ್‌ಗೆ ತೆರಳುವವರು ಹಾಸಿಗೆಯಲ್ಲಿ ಬೆಚ್ಚನೆಯ ನಿದ್ರೆಗೆ ತಲೆಗೊಡುತ್ತಿದ್ದಾರೆ. ಹಾಲು, ಪೇಪರ್ ವಿತರಕರಿಗೂ ಕೆಲಸ ಮಾಡೋದು ಸವಾಲೇ ಆಗಿದೆ.

ಇನ್ನೂ ಕೆಲವರು ಮೈಚಳಿ ಬಿಡಿಸಲು ಮದ್ಯದ ಮೊರೆ ಹೋಗ್ತಿದ್ದಾರೆ. ಹೀಗಾಗಿ ಬ್ರ್ಯಾಂಡಿ, ವಿಸ್ಕಿ, ವೈನ್‌ಗಳಿಗೂ ಬೇಡಿಕೆ ಹೆಚ್ಚಾಗಿದೆ.

ಮಾಂದಲ್‌ಪಟ್ಟಿ, ತಡಿಯಂಡಮೋಳ್, ತಲಕಾವೇರಿ, ಬ್ರಹ್ಮಗಿರಿ ವ್ಯಾಪ್ತಿಯಲ್ಲೂ ಚಳಿ ತೀವ್ರತೆ ಹೆಚ್ಚಾಗಿದೆ. ಜಲಪಾತ, ನದಿ, ತೊರೆಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದರೂ ಸುತ್ತಲ ವಾತಾವರಣ ಮೈನಡುಗುವಂತೆ ಮಾಡಿದೆ.

Must Read