ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಯ 7 ಹಂತಗಳು ಮುಕ್ತಾಯಗೊಂಡಿದ್ದು, ಇಂದು ಮತ ಎಣಿಕೆ ಕಾರ್ಯ ಶುರುವಾಗಿದ್ದು, ಫಲಿತಾಂಶ ಹೊರಬೀಳಲಿದೆ, ರಾಯಚೂರು, ಹಾವೇರಿ ಹಾಗೂ ವಿಜಯಪುರದಲ್ಲಿ ಈವರೆಗಿನ ಕೌಂಟಿಂಗ್ ವಿವರ ಹೀಗಿದೆ..
ರಾಯಚೂರು : ಮೊದಲ ಹಾಗೂ ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಬಿಜೆಪಿಯ ಅಮರೇಶ್ವರ ನಾಯಕ- 22794 ಪಡೆದರೆ ಕಾಂಗ್ರೆಸ್ಸಿನ ಜಿ.ಕುಮಾರ ನಾಯಕ 22669 ಮತಗಳನ್ನು ಪಡೆದುಕೊಂಡಿದ್ದಾರೆ. ಬಿಜೆಪಿಯ ಅಮರೇಶ್ವರ ನಾಯಕ 125 ಮುನ್ನಡೆ ಸಾಧಿಸಿದ್ದಾರೆ.
ಹಾವೇರಿ: ಬಸವರಾಜ ಬೊಮ್ಮಾಯಿ 64,053 ಮತ ಗಳಿಸಿದ್ದರೆ, ಕಾಂಗ್ರೆಸ್‌ನ ಆನಂದಸ್ವಾಮಿ ಗಡ್ಡದೇವರಮಠ 59,483 ಮತ ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗೆ 4,570 ಮತಗಳ ಮುನ್ನಡೆ ಮತಗಳ ಮುನ್ನಡೆ
ವಿಜಯಪುರ: ನಗರದ ಸೈನಿಕ ಶಾಲೆಯಲ್ಲಿ ನಡೆದಿರುವ ಲೋಕಸಭಾ ಚುನಾವಣೆ ವಿಜಯಪುರ ಮೀಸಲು ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು, ಬಿಜೆಪಿ ಅಭ್ಯರ್ಥಿ 2103 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ 2323 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ರಮೇಶ ಜಿಗಜಿಣಗಿ 4426 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ.