ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಯ ಕಾವೇರಿದ್ದು, ಬಿಜೆಪಿ ಎರಡನೇ ಪಟ್ಟಿಗಾಗಿ ಕಾತರದಿಂದ ಎದುರುನೋಡುತ್ತಿದೆ. ಇಂದು ದೆಹಲಿಯಲ್ಲಿ ನಡೆಯಬೇಕಿದ್ದ ಬಿಜೆಪಿ ಸಿಇಸಿ ಸಭೆ ರದ್ದಾಗಿದ್ದು, ಸೋಮವಾರ (ಮಾ. 11) ಸಂಜೆ 5 ಗಂಟೆಗೆ ಮುಂದೂಡಿಕೆಯಾಗಿದೆ.
ಈ ವೇಳೆ ಎರಡನೇ ಪಟ್ಟಿ ಕುರಿತು ರಾಜ್ಯದ ಪ್ರಮುಖ ನಾಯಕರು ದೆಹಲಿಗೆ ತೆರಳಲಿದ್ದಾರೆ.ಪಕ್ಷದ ಹಿರಿಯ ನಾಯಕರಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಆರ್. ಅಶೋಕ್, ಅರವಿಂದ್ ಬೆಲ್ಲದ್, ಪ್ರಲ್ಹಾದ ಜೋಷಿ, ಬಿ.ವೈ. ವಿಜಯೇಂದ್ರ, ರಾಜೇಶ್ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.
ಮಾರ್ಚ್ 02ರಂದು ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿತ್ತು.195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದರು. ಈ ಪಟ್ಟಿಯಲ್ಲಿ ಕರ್ನಾಟಕದಿಂದ ಯಾವುದೇ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಹೆಸರನ್ನು ಘೋಷಿಸರಲಿಲ್ಲ. ಆದರೆ ಈಗ ಎರಡನೇ ಪಟ್ಟಿಯಲ್ಲಿ ನಿರೀಕ್ಷಿಸಲಾಗಿದೆ.