ಕೇರಳದಲ್ಲಿ ಬಿಜೆಪಿಗೆ ಸಿಕ್ಕಿತು ಬಲ: ಎನ್ ಡಿಎ ಜೊತೆ ‘ಕೇರಳ ಜನಪಕ್ಷಂ’ ವಿಲೀನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದ್ದು, ಕೇರಳದಲ್ಲೂ ಬಿಜೆಪಿ ಗೆಲುವಿಗಾಗಿ ತಂತ್ರ ರೂಪಿಸುತ್ತಿದೆ. ಇದರ ನಡುವೆ ಇಂದು ಪಿ.ಸಿ.ಜಾರ್ಜ್ ನೇತೃತ್ವದ ಕೇರಳ ಜನಪಕ್ಷಂ(ಜಾತ್ಯತೀತ) ಬಿಜೆಪಿಯೊಂದಿಗೆ ವಿಲೀನಗೊಂಡಿದೆ.

ಕೇಂದ್ರ ಸಚಿವ ಪ್ರಕಾಶ್‌ ಜಾವೇಡಕರ್ ಅವರ ಸಮ್ಮುಖದಲ್ಲಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿ.ಸಿ ಜಾರ್ಜ್, ಮಗ ಶಾನ್‌ ಮತ್ತು ಪಕ್ಷದ ಇತರ ಮುಖಂಡರೊಂದಿಗೆ ಬಿಜೆಪಿಗೆ ಸೇರಿದ್ದಾರೆ.

‘ಇಂದು ಪಿ. ಸಿ. ಜಾರ್ಜ್ ನೇತೃತ್ವದ ಕೇರಳ ಜನಪಕ್ಷಂ (ಜಾತ್ಯತೀತ) ಬಿಜೆಪಿಯೊಂದಿಗೆ ವಿಲೀನಗೊಂಡಿದೆ. 2047ರ ವೇಳೆಗೆ ಭಾರತವನ್ನು ‘ವಿಕಸಿತ ಭಾರತ’ ಆಗಿ ಪರಿವರ್ತಿಸುವ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಲ್ಲಿ ವಿಶ್ವಾಸವಿಟ್ಟು ಈ ನಿರ್ಧಾರ ತೆಗೆದುಕೊಂಡಿದೆ’ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಿಲ್ ಆಂಟೋನಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

‘ಜನಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವ ಮೂಲಕ ಕೇರಳದಲ್ಲಿ ಐತಿಹಾಸಿಕ ಬದಲಾವಣೆಗೆ ಮುನ್ನುಡಿ ಹಾಡಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಇನ್ನಷ್ಟು ಬೆಳೆಯಲು ಇದು ಸಹಕಾರಿಯಾಗಲಿದೆ’ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!