ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಆರೋಪಗಳಿಗೆ ತಿರುಗೇಟು ನೀಡುವ ಹಾಡಿನ ವೀಡಿಯೊವನ್ನು ಬಿಜೆಪಿ ತನ್ನ ಟ್ವಿಟರ್ ವೇದಿಕೆಯಲ್ಲಿ ಪೋಸ್ಟ್ ಮಾಡಿದೆ. ಕಾಂಗ್ರೆಸ್, ಕೇಂದ್ರ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದು, ಪ್ರಧಾನಿ ಮೋದಿ ನಿನ್ನೆ (ಗುರುವಾರ) ಅವಿಶ್ವಾಸ ನಿರ್ಣಯದ ಮೇಲೆ ಪ್ರತಿಪಕ್ಷಗಳ ಮೈತ್ರಿಗೆ ತಕ್ಕ ಉತ್ತರ ಕೊಟ್ಟರು. ಮೋದಿ ಭಾಷಣದಲ್ಲಿ ಪ್ರತಿಪಕ್ಷಗಳ ಟೀಕೆಯನ್ನು ಆಧರಿಸಿ ಬಿಜೆಪಿ ಹಾಡಿನ ಮೂಲಕ ಸರಿಯಾದ ಪ್ರತಿಕ್ರಿಯೆ ನೀಡಿದೆ.
ರಾಹುಲ್ ಗಾಂಧಿ ಪದೇ ಪದೇ ಹೇಳುವ ʻಮೇನ್ ನಫ್ರತ್ ಕೆ ಬಜಾರ್ ಮೆ ಮೊಹಬ್ಬತ್ ಕಿ ದುಕಾನ್ ಖೋಲ್ ಕರ್ ಬೈತಾ ಹೂಂʼ ಡೈಲಾಗ್‌ಗೆ ಹಾಡಿನ ಮೂಲಕ ಬಿಜೆಪಿ ಈ ರೀತಿ ತಿರುಗೇಟು ನೀಡಿದೆ. ʻಪ್ರೀತಿ ಎಂಬುದು ಹೃದಯದಲ್ಲಿ ಇರುವಂಥದ್ದು, ಅಂಗಡಿಯಲ್ಲಿ ಸಿಗುವುದಿಲ್ಲʼ ಎಂದು ವ್ಯಂಗ್ಯವಾಡಿದೆ. ಒಂಬತ್ತು ವರ್ಷಗಳಲ್ಲಿ ಮೋದಿ ಸರಕಾರ ಬಡ ಜನರಿಗಾಗಿ ಜಾರಿಗೆ ತಂದ ಎಲ್ಲಾ ಯೋಜನೆಗಳನ್ನು ಹಾಡಿನಲ್ಲಿ ಉಲ್ಲೇಖಿಸಲಾಗಿದೆ. ಮೇಲಾಗಿ.. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಜನರಿಗೆ ಮಾಡಿದ ಅನ್ಯಾಯವನ್ನೂ ಟೀಕಿಸಿದೆ.
ಬಿಜೆಪಿ ಬಿಡುಗಡೆ ಮಾಡಿರುವ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
मोहब्बत दिल में रहती है, दुकान में नहीं
ये तो कमाई जाती है, कहीं बिकती नहीं
ये तो दिल में रहती है, दुकान में नहीं। pic.twitter.com/JqfEHMXnNu— BJP (@BJP4India) August 11, 2023