ಹೊಸದಿಗಂತ ಡಿಜಿಟಲ್ ಡೆಸ್ಕ್ :
ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ ವಿರುದ್ಧ ಕಾಂಗ್ರೆಸ್ ಫೈಲ್ಸ್ ಎಂಬ ಸರಣಿಯನ್ನು ಪ್ರಾರಂಭಿಸಿದ್ದು, ಇದ್ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಮತ್ತು ಹಗರಣಗಳ ಬಗ್ಗೆ ಉಲ್ಲೇಖಿಸಲಾಗಿದೆ.
2ಜಿ ಪ್ರಕರಣ, ಕಲ್ಲಿದ್ದಲು ಹಗರಣ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಸಾಲು ಸೇರಿದಂತೆ ವಿವಿಧ ಹಗರಣಗಳಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಭಾಗಿಯಾಗಿದೆ ಎಂದು ಆರೋಪಿಸಿ “ಕಾಂಗ್ರೆಸ್ ಫೈಲ್ಸ್” ಎಂಬ ವಿಡಿಯೋ ಸರಣಿಯ ಮೊದಲ ಸಂಚಿಕೆಯನ್ನು ಪಕ್ಷವು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದೆ.
ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರಿರುವ ಮೂರು ನಿಮಿಷಗಳ ವೀಡಿಯೊ ಕ್ಲಿಪ್, ಯುಪಿಎ ಅವಧಿಯಲ್ಲಿ ನಡೆದಿದೆ ಎನ್ನಲಾದ 48,20,69,00,00,000 ರೂ. ಮೌಲ್ಯದ ಹಗರಣಗಳನ್ನು ಪಟ್ಟಿಮಾಡಿದೆ .
ಇದ್ರಲ್ಲಿ 24 INS ವಿಕ್ರಾಂತ್ , 300 ರಫೇಲ್ ವಿಮಾನಗಳು ಮತ್ತು 1000 ಮಂಗಳಯಾನ ಯೋಜನೆಗಳನ್ನು ಪ್ರಾರಂಭಿಸಬಹುದು ಎಂದು ಹೇಳಲಾಗಿದೆ. ಕಾಂಗ್ರೆಸ್‌ನ ಹಗರಣ, ಭ್ರಷ್ಟಾಚಾರಕ್ಕೆ ದೇಶ ಬೆಲೆ ತೆರಬೇಕಾಗಿದ್ದು, ಕಾಂಗ್ರೆಸ್‌ನಿಂದಾಗಿ ನಮ್ಮ ದೇಶ ಪ್ರಗತಿ ಮತ್ತು ಅಭಿವೃದ್ಧಿ ಪಥದಲ್ಲಿ ಹಿಂದೆ ಬಿದ್ದಿದೆ ಎಂದು ಬಿಜೆಪಿ ಹೇಳಿದೆ.
ಕಳೆದ 10 ವರ್ಷಗಳ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಗಸ್ಟಾ ವೆಸ್ಟ್‌ಲ್ಯಾಂಡ್ ಸಿಇಒ ಲಂಚ ನೀಡಿದ್ದಾರೆ ಎಂದು ಆರೋಪ, ವಿವಿಐಪಿ ಹೆಲಿಕಾಪ್ಟರ್ ಖರೀದಿಯಲ್ಲಿ 350 ಕೋಟಿ ಲಂಚ, ಒಂದು ಲಕ್ಷದ 86 ಸಾವಿರ ಕೋಟಿ ಕಲ್ಲಿದ್ದಲು ಹಗರಣ, ಒಂದು ಲಕ್ಷದ 86 ಸಾವಿರ ಕೋಟಿ ಹಗರಣವನ್ನು ಉಲ್ಲೇಖಿಸಿ, ಸುಮಾರು 10 ಸಾವಿರ ಕೋಟಿಯ ಎಂಎನ್‌ಆರ್‌ಇಜಿಎ ಹಗರಣ, 70 ಸಾವಿರ ಕೋಟಿ ಕಾಮನ್‌ವೆಲ್ತ್ ಹಗರಣ ಮತ್ತು ಇಟಲಿಯಿಂದ ಹೆಲಿಕಾಪ್ಟರ್ ಡೀಲ್‌ನಲ್ಲಿ 362 ಕೋಟಿ ಲಂಚ ಪಡೆದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮತ್ತು ಹಗರಣಗಳ ಸರ್ಕಾರವಾಗಿದೆ ಎಂದು ಹೇಳಿದರು.