ರಾಜ್ಯದ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಗೆಲುವು: ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ

ಹೊಸದಿಗಂತ ವರದಿ, ಚಿಕ್ಕೋಡಿ:

ಬೆಳಗಾವಿಯ ಬಿಜೆಪಿಯಲ್ಲಿ ಯಾವದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರು ಸಕ್ರಿಯವಾಗಿ ತೊಡಗಿ ಚುನಾವಣೆ ಗೆಲ್ಲುತ್ತೆವೆ.ರಾಜ್ಯದ ನಾಲ್ಕು ಕ್ಷೇತ್ರದಲ್ಲಿ ಬಿ.ಜೆ.ಪಿ ಗೆಲುವು ಸಾಧಿಸುತ್ತದೆ. ಮತದಾರರು ಬಿ.ಜೆ.ಪಿ ಮೇಲೆ ಸಂಪುರ್ಣವಾದ ವಿಶ್ವಾಸವಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗು ರಸಗೊಬ್ಬರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಪಟ್ಟಣದ ಕೇಶವ ಕಲಾ ಭವನದಲ್ಲಿ ಶನಿವಾರ ಆಯೋಜಿಸಲಾದ ವಾಯವ್ಯ ಪದವಿ ಮತ್ತು ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದರು.

ಪ್ರಚಾರ ಸಭೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮೋದಿ ಸರಕಾರದ ಆಡಳಿತ ವಿರುದ್ದ ವಿಪಕ್ಷಗಳು ಲಂಚದ ಆರೋಪಮಾಡುವ ಧೈರ್ಯೆ ಇಲ್ಲದಂತಾಗಿದೆ. ಭಾರತ ಜಗತ್ತಿನಲ್ಲೆ ಆರ್ಥಿಕ ಸದೃಢತೆ ಕಾಯ್ದುಕೊಳ್ಳಲು ಮೋದಿ ನೇತೃತ್ವದ ಸರಕಾರದಲ್ಲಿ ಸಾದ್ಯವಾಗಿದೆ.ಬಯೋತ್ಪಾದನೆ ವಿರುದ್ದ ಪಾಕ್, ಚಿನಾ ದೇಶಕ್ಕೆ ದಿಟ್ಟ ಉತ್ತರ ನೀಡಿದೆ ಭಾರತ . ಪ್ರತಿದಿನ ೧೦ ಕಿ.ಮಿ ರೈಲು ಮಾರ್ಗ ಹೊಸದಾಗಿ ಭಾರತದಲ್ಲಿ ನಿರ್ಮಿಸಲಾಗುತ್ತಿದೆ ಎಂದರು.
ಅರಣ್ಯ, ಆಹಾರ ನಾಗರಿಕ ಇಲಾಖೆ ಸಚಿವ ಉಮೇಶ ಕತ್ತಿ, ಧಾರ್ಮಿಕ ದತ್ತಿ ಇಲಾಖೆ ಸಚಿವೇ ಶಶಿಕಲಾ ಜೊಲ್ಲೆ ,ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಉಪಮುಖ್ಯಮಂತ್ರಿ ಲಕ್ಷಣ ಸವದಿ. ಪಿ‌. ರವಿಕುಮಾರ, ಈರಣ್ಣ ಕಡಾಡಿ,ರಾಜ್ಯ ಬಿ‌ಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ , ಕೊಳಗೇರಿ ನಿಗಮ ಮಂಡಳಿ ಅದ್ಯಕ್ಷ ಮಹೇಶ ಕುಮಠಳ್ಳಿ,ಮಾಜಿ ವಿಧಾನ ಪರಿಷತ್ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ,ಅರುಣಕುಮಾರ ಶಾಹಾಪೂರ್,ಹಣಮಂತ ನಿರಾಣಿ, ಬಿ.ಜೆ.ಪಿ ಜಿಲ್ಲಾ ಅಧ್ಯಕ್ಷ ಡಾ. ರಾಜೇಶ ನೇರ್ಲಿ, ರಾಜ್ಯ ಕಾರ್ಯದರ್ಶಿ ಉಜ್ವಲಾ ಬಡವನಾಚೆ, ಬಸವರಾಜ ಯಕ್ಕಂಚಿ,ಸತೀಶ ಅಪ್ಪಾಜೀಗೋಳ ಸ್ವಾಗತಿಸಿದರು,ಸುರೇಶ ಉಕಲಿ ನಿರೂಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!