ಹಿಂದುತ್ವ ಮರೆತಿದ್ದಕ್ಕೆ ಬಿಜೆಪಿ ವಿಪಕ್ಷದ ಸ್ಥಾನದಲ್ಲಿ ಕುಳಿತಿದೆ: ಪ್ರಮೋದ ಮುತಾಲಿಕ್

ಹೊಸದಿಗಂತ ವರದಿ, ಹಾವೇರಿ:

ಬಿಜೆಪಿ ಹಿಂದುತ್ವವನ್ನು ಮರೆತಿದ್ದಕ್ಕೆ ಇಂದು ವಿಪಕ್ಷದ ಸ್ಥಾನದಲ್ಲಿದೆ. ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸದೇ ಕೇವಲ ರಾಜಕಾರಣ ಮಾಡಿದ್ದರಿಂದ ಜನತೆ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂದು ಶ್ರೀರಾಮ ಸೇನಾ ಅದ್ಯಕ್ಷ ಪ್ರಮೋದ ಮುತಾಲಿಕ ಬಿಜೆಪಿ ವಿರುದ್ದ ಹರಿಹಾಯ್ದರು.

ನಗರದ ಶಂಕರ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಕಟ್ಟಲು ನಾವೆಲ್ಲ ಕಷ್ಟಪಟ್ಟಿದ್ದೇವೆ. ಹೀಗಾಗಿ ಅವರನ್ನು ಪ್ರಶ್ನಿಸುವ ಹಕ್ಕೂ ನಮಗಿದೆ. ಇನ್ನು ಕಿತ್ತೂರು ರಾಣಿ ಚೆನ್ನಮ್ಮನನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಕಡೆಗಣಿಸಿದೆ. ೨೦೦ನೇ ವಿಜಯೋತ್ಸವ ಸಪ್ಪೆಯಾಗಿದೆ. ಯಾವುದೇ ಪತ್ರಿಕೆಯಲ್ಲಿ ಜಾಹೀರಾತು ಇಲ್ಲ. ಆದರೇ ತಮ್ಮ ಇಲಾಖೆ ಅಥವಾ ವೈಯಕ್ತಿಕ ಹಿತಾಸಕ್ತಿಯ ವಿಚಾರಗಳಿಗೆ ಹೆಚ್ಚಿನ ಜಾಹೀರಾತುಗಳನ್ನು ನೀಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಶಿಗ್ಗಾಂವಿಯಲ್ಲಿ ಮುಸ್ಲಿಂಮರ ದರ್ಪ ನಡೆದಿದೆ. ಹೂ ಹಣ್ಣು ತರಕಾರಿ ಎಲ್ಲ ಅವರ ಕೈಯಲ್ಲಿದೆ. ಬೊಮ್ಮಾಯಿ ಮಗನಿಗೆ ಮನವಿ ಕೊಡ್ತಿವಿ ನಮ್ಮ ಬೇಡಿಕೆ ಈಡೇರಿಸಬೇಕು. ಆಗ ನಮ್ಮ ಬೆಂಬಲ ನೀಡುವ ಜತೆಗೆ ಪ್ರಚಾರದಲ್ಲೂ ನಾವು ಪಾಲ್ಗೊಳ್ಳುತ್ತೇವೆ. ನಮ್ಮ ಪ್ರಮುಖ ಬೇಡಿಕೆಗಳಲ್ಲಿ ನಂ.೧. ಗೆದ್ದ ಕೂಡಲೇ ರಸ್ತೆ ಮೇಲೆ ಬಂಕಾಪುರ ಘೊರಿ ತೆರವು ಮಾಡಬೇಕು. ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕು. ನಂ.೨ ಲವ್ ಜಿಹಾದ್ ನಿರಂತರವಾಗಿ ನಡೆಯುತ್ತಿದೆ. ಅದನ್ನು ನಿವಾರಿಸಲು ಹಿಂದು ಹುಡುಗಿಯರ ರಕ್ಷಣೆ ಆಗಬೇಕು. ಪೊಲೀಸ ಠಾಣೆಗೆ ಹೋದಾಗ ನಮ್ಮ ಕಾರ್ಯಕರ್ತರಿಗೆ ಸ್ಪಂದಿಸಿ. ಹಿಂದೂ ಹೆಣ್ಮಕ್ಕಳ ರಕಕ್ಷಣೆ ಹೊಣೆ ನಿಮ್ಮದೇ ಅಲ್ಲವೇ ಎಂದು ಪ್ರಶ್ನಿಸಿದರು.

ನಂ.೩. ಗೋ ಹತ್ಯೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ನಡೆಯುತ್ತಿದೆ. ಸಾಗಾಣಿಕೆಯ ದಂದೆ ನಡೆದಿದೆ. ಗೋಹತ್ಯೆ ಸಂಪೂರ್ಣವಾಗಿ ನಿಲ್ಲಬೇಕು.

ನಂ.೪ ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಬೇಕು. ದುಷ್ಟರು, ಕಿಡಿಗೇಡಿಗಳ ಪ್ರಕರಣ ಹುಬ್ಬಳ್ಳಿಯಲ್ಲಿ ವಾಪಸ್ ಪಡೆದಿದ್ದಾರೆ. ಅಂಥ ದುರುಳರ ಪ್ರಕರಣ ಕೈಬಿಟ್ಟಿದ್ದು, ನಮ್ಮವರ ಮೇಲೆ ಈ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಹಿಂದೂ ಹೆಣ್ಮಕ್ಕಳ ರಕ್ಷಣೆ, ಗೋ ರಕ್ಷಣೆ ಮಾಡಿದವರ ಮೇಲೆ, ಹಿಂದೂಗಳ ಮೇಲೆ ಪ್ರಕರಣ ದಾಖಲೊಸಲಾಗಿದ್ದು, ಅವುಗಳನ್ನು ಕೈಬಿಡಿ. ಈ ಜಿಲ್ಲೆ ಸಂಪೂರ್ಣ ಹಿಂದೂ ದೌರ್ಜನ್ಯ ರಹಿತ ಜಿಲ್ಲೆಯಾಗಬೇಕು. ಈ ಬಗ್ಗೆ ನಾವೆಲ್ಲ ಒಟ್ಟಿಗೆ ಹೋಗಿ ಬಸವರಾಜ ಬೊಮ್ಮಾಯಿ, ಭರತ್ ಬೊಮ್ಮಾಯಿಗೆ ಮನವಿ ಸಲ್ಲಿಸ್ತಿವಿ. ಅಚರ ಸ್ಪಂದನೆ ಆಧರಿಸಿ ಮುಂದಿನ ಚರ್ಚೆ ಮಾಡ್ತಿವಿ.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಕಾಂಗ್ರೆಸ್ ಗೆ ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಮತಾಂಧರ, ಹಿಂದೂ ವಿರೋಧಿಗಳಿಗೆ ಯಾವತ್ತೂ ನಮ್ಮ ಬೆಂಬಲವಿಲ್ಲ. ಇವರು ನಮ್ಮ ಬೇಡಿಕೆಗೆ ಸ್ಪಂದಿಸದೇ ಇದ್ದಲ್ಲಿ ನೋಟಾ ಚಲಾವಣೆ, ಅಥವಾ ಒಬ್ಬ ಸಾಮಾನ್ಯ ಹಿಂದೂ ಕಾರ್ಯಕರ್ತನನ್ನು ನಿಲ್ಲಿಸ್ತಿವಿ, ಗೆಲ್ಲಿಸ್ತಿವಿ ಎಂದರಯ.

ಈ ವೇಳೆ ಜಿಲ್ಲಾದ್ಯಕ್ಷ ಶ್ರೀ ರಾಮ ಸೇನಾ ಲೋಕೇಶ ಕಾರಡಗಿ, ಧಾರವಾಡ ವಿಭಾಗ ಅಧ್ಯಕ್ಷ ಗದಿಗೆಪ್ಪ ಕುರವತ್ತಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!