ಅಗ್ನಿಪಥದ ಮೂಲಕ ಬಿಜೆಪಿ ತನ್ನದೇ ಸಶಸ್ತ್ರ ಕಾರ್ಯಕರ್ತರ ಪಡೆ ರಚಿಸಲು ಪ್ರಯತ್ನಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಗ್ನಿಪಥ ಯೋಜನೆಯ ಮೂಲಕ ಬಿಜೆಪಿ ತನ್ನದೇ ಆದ ಸಶಸ್ತ್ರ ಕಾರ್ಯಕರ್ತರನ್ನು ರಚಿಸಲು ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಅಗ್ನಿಪಥ್ ಯೋಜನೆ ಮೂಲಕ ಸಶಸ್ತ್ರ ಪಡೆಗಳಲ್ಲಿ ನೇಮಕಾತಿ ಕುರಿತು ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು “ಬಿಜೆಪಿಯು ಈ ಯೋಜನೆಯ ಮೂಲಕ ತನ್ನದೇ ಆದ ಶಸ್ತ್ರಸಜ್ಜಿತ ಕೇಡರ್ ಬೇಸ್ ಅನ್ನು ರಚಿಸಲು ಪ್ರಯತ್ನಿಸುತ್ತಿದೆ. ನಾಲ್ಕು ವರ್ಷಗಳ ನಂತರ ಅವರು ಏನು ಮಾಡುತ್ತಾರೆ? ಪಕ್ಷವು ಯುವಕರ ಕೈಗೆ ಶಸ್ತ್ರಾಸ್ತ್ರಗಳನ್ನು ನೀಡಲು ಬಯಸುತ್ತದೆ” ಎಂದು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಹರಿಹಾಯ್ದರು.

ನಾಲ್ಕು ವರ್ಷಗಳ ಸೇವಾ ಅವಧಿಯ ನಂತರ ಬಿಜೆಪಿ ತನ್ನ ಪಕ್ಷದ ಕಚೇರಿಗಳಲ್ಲಿ ‘ಅಗ್ನಿವೀರ್’ ಸೈನಿಕರನ್ನು “ಕಾವಲುಗಾರ”ರನ್ನಾಗಿ ನೇಮಿಸಿಕೊಳ್ಳಲು ಯೋಜಿಸುತ್ತಿದೆಯೇ ಎಂದು ಅವರು ಪ್ರಶ್ನಿಸಿದರು.

ಪ್ರತಿಭಟನೆಗಳ ಹೊರತಾಗಿಯೂ, ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಕೇಂದ್ರವು ಈಗಾಗಲೇ ಸ್ಪಷ್ಟಪಡಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!