ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ- ಜೆಡಿಎಸ್ ಜೊತೆಯಾಗಿ ಹೋರಾಟ: ಕುಮಾರಸ್ವಾಮಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಸಿಡಿದೆದ್ದ ಬಿಜೆಪಿಗೆ ಜೆಡಿಎಸ್ ಕೂಡ ಸಾಥ್ ನೀಡಿದ್ದು, ಇದೀಗ ಸರಕಾರದ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಸದನದ ಒಳಗೂ ಹೊರಗೂ ನಾನು ಮತ್ತು ಬೊಮ್ಮಾಯಿ ಒಟ್ಟಾಗಿ ಹೋರಾಟ ಮಾಡ್ತೀವಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಘೋಷಣೆ ಮಾಡಿದ್ದಾರೆ.

ಮಾಜಿ ಸಿಎಂಗಳಾದ ಹೆಚ್.ಡಿ ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಜೆಡಿಎಸ್ (JDS) ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಹೆಚ್‌ಡಿಕೆ ಮಾತನಾಡಿ, ವಿರೋಧ ಪಕ್ಷದಲ್ಲಿ ನಾನು ಇದ್ದೇನೆ, ಬೊಮ್ಮಾಯಿ ಅವರೂ ಇದ್ದಾರೆ. ನಾಡಿನ ಹಿತಾಸಕ್ತಿ ಕಾಪಾಡುವ ಸಲುವಾಗಿ ಹೋರಾಟ ಮಾಡಲು ನಾವು ಒಗ್ಗಟ್ಟಾಗಿ ಹೋಗುತ್ತಿದ್ದೇವೆ ಎಂದಿದ್ದಾರೆ.

ಕಾಂಗ್ರೆಸ್‌ನವರಿಗೆ ಸರ್ಕಾರ ಬೇಕಿಲ್ಲ. ಭೂಮಿ ಲಪಟಾಯಿಸೋದು ಬೇಕು. ಇದು ಒಂದು ರೀತಿ ಈಸ್ಟ್ ಇಂಡಿಯಾ ಕಂಪನಿಯ ಆಡಳಿತ. ಸರ್ಕಾರಕ್ಕೆ ನಿಜಕ್ಕೂ ಜನತೆಗೆ, ರೈತರಿಗೆ ಒಳ್ಳೆಯದು ಮಾಡಬೇಕು ಅನ್ನೋ ಮನಸ್ಸಿದ್ದರೆ ಸರ್ಕಾರ ಸುಪರ್ದಿಗೆ ಬರಬೇಕಾದ ಭೂಮಿಯನ್ನ ಸ್ವಾಧೀನಪಡಿಸಿಕೊಳ್ಳಿ. ನನ್ನ ಪಕ್ಷದವ ಆಸ್ತಿ ಇದ್ದರೂ ಮುಟ್ಟುಗೋಲು ಹಾಕಿಕೊಳ್ಳಿ ಎಂದರಲ್ಲದೇ ಅಕ್ರಮ ಭೂಕಬಳಿಕೆ ಬಯಲಿಗೆಳೆಯಬೇಕಾದ್ರೆ ಈ ತನಿಖೆಯನ್ನ ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದಾರೆ.

ನೀವೇ ಸದನ ಹೇಗೆ ನಡೆಯುತ್ತಿದೆ ಅನ್ನೋದನ್ನ ಗಮನಿಸಿದ್ದೀರಿ.ಕಲಾಪದ ಮೌಲ್ಯಗಳು ಕುಸಿಯುತ್ತಿವೆ. ಶಿಷ್ಟಾಚಾರದ ಹೆಸರಲ್ಲಿ ಅಧಿಕಾರಿಗಳ ದುರುಪಯೋಗ ಆಗಿದೆ. ಐಎಎಸ್ ನಿವೃತ್ತ ಅಧಿಕಾರಿ ಮದನ್ ಗೋಪಾಲ್ ಅವರೂ ಇದನ್ನೇ ಹೇಳಿದ್ದಾರೆ ಎಂದು ಟೀಕಿಸಿದ್ದಾರೆ.

ನೈಸ್ ರಸ್ತೆ ಪ್ರಾಜೆಕ್ಟ್ ಬಗ್ಗೆ ಜಯಚಂದ್ರ ಅವರು ಮಾತನಾಡಿದ್ದಾರೆ. ಹಿಂದೆ ಜಯಚಂದ್ರ ನೇತೃತ್ವದ ಸದನ ಸಮಿತಿ ನೈಸ್ ಸಂಬಂಧ ವರದಿ ಕೊಟ್ಟಿದೆ. ನೈಸ್ ಸದನ ಸಮಿತಿಯ ವರದಿ ಜಾರಿ ಮಾಡಿ ನೈಸ್ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ನಾನು ಮೈತ್ರಿ ಸರ್ಕಾರದಲ್ಲಿದ್ದಾಗ ಏಕೆ ಮಾಡಲಿಲ್ಲ ಅಂತ ಕೇಳಬಹುದು. ಅಲ್ಲಿ ನನ್ನನ್ನ ಕಟ್ಟಿ ಹಾಕಿದ್ದರು. ಒಳಗೆ ಯರ‍್ಯಾರು ಏನೇನು ಅಡ್ಜಸ್ಟ್ ಮಾಡಿಕೊಂಡಿದ್ದಾರೋ ಗೊತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

ಕಲಾಪದಲ್ಲಿ ನಡೆದ ಮೊನ್ನೆ ಘಟನೆಯನ್ನ 2 ನಿಮಿಷದಲ್ಲಿ ಮುಗಿಸಬಹುದಿತ್ತು. ಆದ್ರೆ ಮಧ್ಯಾನದ ಊಟಕ್ಕೆ ಬಿಡದೆ ಬುದ್ದಿ ಕಲಿಸುತ್ತೇನೆ ಎಂದು ಶಾಲಾ ಮಕ್ಕಳಿಗೆ ಹೆದರಿಸಿದಂತೆ ಹೆಸರಿಸೋದು ಸರಿಯಲ್ಲ. ಹಾಲಿ ಉಪ ಮುಖ್ಯಮಂತ್ರಿಗಳೂ ಹಿಂದೆ ಪೇಪರ್ ಎಸೆದಿಲ್ವಾ.? ಮೈಕ್ ಕಿತ್ತು ಎಸೆದಿಲ್ವಾ? ಧರ್ಮೆಗೌಡರಿಗೆ ಏನು ಮಾಡಿದರು? ಎಂದು ಪ್ರಶ್ನೆ ಮಾಡಿದರು.

ಕೃಷಿ ಸನ್ಮಾನ್‌ನಿಂದ ರಾಜ್ಯದ ರೈತರಿಗೆ ಬರುತ್ತಿದ್ದ 4 ಸಾವಿರ ರೂ. ನಿಲ್ಲಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಸರ್ಕಾರ ಅನ್ನದಾತರನ್ನ ಬೀದಿಗೆ ತಂದು ನಿಲ್ಲಿಸಿದೆ. ಬರದ ಬಗ್ಗೆ ಮಾತಾಡಬೇಕಿತ್ತು ಅದಕ್ಕೆ ಅವಕಾಶ ಕೊಡಲಿಲ್ಲ. ನಮ್ಮಿಂದ ಹೋದವರು ಟವೆಲ್, ಕೊಡವಿ ಮಾತನಾಡುವವರು ದಲಿತ ಉಪಾಧ್ಯಕ್ಷ ಅಂತಾರೆ. ಅವರು ಹಾಗೆ ಹೇಳಬಹುದು ನಾವು ಮಾಡಿದ್ದು ತಪ್ಪು ಅಂತಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!