ಬಿಜೆಪಿ-ಜೆಡಿಎಸ್‌ ಶಾಸಕರಿಗೂ ಅನುದಾನ ಸಿಗುತ್ತೆ ತಾಳ್ಮೆಯಿಂದ ಇರಬೇಕು: ಡಿಕೆಶಿ ಕಿವಿಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿ-ಜೆಡಿಎಸ್‌ ಶಾಸಕರಿಗೂ ಅನುದಾನ ಸಿಗುತ್ತದೆ, ತಾಳ್ಮೆಯಿಂದ ಇರಬೇಕು ಎಂದು ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಇದು ಬಜೆಟ್‌ನಲ್ಲೇ ತೀರ್ಮಾನ ಮಾಡಲಾಗಿತ್ತು. ಇದಕ್ಕಾಗಿ 8 ಸಾವಿರ ಕೋಟಿಯನ್ನ ಮೀಸಲಿಟ್ಟಿದ್ದೆವು. ಪಿಡಬ್ಲ್ಯೂಡಿ ಇಲಾಖೆಯ ರಸ್ತೆ, ಸೇತುವೆ ಹಾಗೂ ಶಾಸಕರ ವಿವೇಚನೆಗೆ ಅನುಗುಣವಾಗಿ ಬಳಸಲು ಅನುದಾನ ಬಿಡುಗಡೆ ಮಾಡಿದ್ದೇವೆ. ಬಿಜೆಪಿ-ಜೆಡಿಎಸ್‌ನವರು ತಾಳ್ಮೆಯಿಂದ ಇರಬೇಕು, ನಿಮಗೂ ಅನುದಾನ ಸಿಗುತ್ತೆ. ಈಗ ಪ್ರಾರಂಭ ಆಗಿದೆ. ಎಲ್ಲರಿಗೂ ಅನುದಾನ ಕೊಡ್ತೀವಿ ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!