ಬಿಜೆಪಿ ಶಾಸಕ ಮುನಿರತ್ನ ತಲೆಗೆ ಏಟು: ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನಅವರು ಮಲ್ಲೇಶ್ವರದ ಕೆಸಿ ಜನರಲ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

ತಲೆಗೆ ಪೆಟ್ಟಾದ ಹಿನ್ನೆಲೆಯಲ್ಲಿ ಅಬ್ಸರ್‌ವೇಷನ್‌ನಲ್ಲಿ ಇರುವಂತೆ ವೈದ್ಯರು ಮುನಿರತ್ನ ಅವರಿಗೆ ಸೂಚಿಸಿದ್ದರು. ಬುಧವಾರದ ರಾತ್ರಿಯನ್ನು ಆಸ್ಪತ್ರೆಯಲ್ಲಿ ಕಳೆದಿದ್ದ ಮುನಿರತ್ನ ಗುರುವಾರ ಬೆಳಗ್ಗೆ ಡಿಸ್ಚಾರ್ಜ್‌ ಆಗಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮಗಳು ಪ್ರಶ್ನೆ ಕೇಳಿದ್ದಕ್ಕೆ ಈಗ ನಾನು ಏನು ಹೇಳುವುದಿಲ್ಲ. ಬೆಳಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನೂ ಹೇಳುತ್ತೇನೆ ಎಂದು ತಿಳಿಸಿದರು.

ಗುರುವಾರ ಲಗ್ಗೆರೆ ವಾರ್ಡ್‌ನಲ್ಲಿರುವ ಲಕ್ಷ್ಮಿ ದೇವಿ ನಗರದಲ್ಲಿ ವಾಜಪೇಯಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮರಳಿ ಕಾರಿನತ್ತ ನಡೆದುಕೊಂಡು ಹೋಗುತ್ತಿದ್ದಾಗ ಮೊಟ್ಟೆ ದಾಳಿ ನಡೆದಿತ್ತು. ಕೂಡಲೇ ದಾಳಿಕೋರರನ್ನು ಮುನಿರತ್ನ ಬೆಂಬಲಿಗರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ದಾಳಿ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಂಸದ ಡಿಕೆ ಸುರೇಶ್, ಕುಸುಮಾ, ಹನುಮಂತರಾಯಪ್ಪ ಇದ್ದಾರೆ. ಪೊಲೀಸರು ಇಲ್ಲದಿದ್ರೆ ನನ್ನ ಕೊಲೆ ಆಗುತ್ತಿತ್ತು. ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕುಸುಮಾ ಶಾಸಕಿ ಆಗಬೇಕು ಎಂದು ಇತ್ತೀಚಿಗೆ ಕೆಲವರು ಧಮ್ಕಿ ಹಾಕ್ತಿದ್ದಾರೆ ಎಂದು ಮುನಿರತ್ನ ಆರೋಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!