ಹೊಸ ದಿಗಂತ ವರದಿ, ಬಾಗಲಕೋಟೆ :
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಜ.29 ರಂದು ನಗರಕ್ಕೆ ಆಗಮಿಸಲಿದ್ದಾರೆ.
ಜ.29 ರಂದು ಬೆಳಗ್ಗೆ 11 ರಿಂದ ಸಂಜೆ 5 ಗಂಟೆವರೆಗೆ ನವನಗರದಲ್ಲಿರುವ ಬಿಜೆಪಿ ನೂತನ ಜಿಲ್ಲಾ ಕಾರ್ಯಾಲಯದಲ್ಲಿ ನಡೆಯುವ ಜಿಲ್ಲಾ ಕೋರ ಕಮೀಟಿ ಸಭೆಯಲ್ಲಿ ಭಾಗವಹಿಸುವರು.
ಸಂಜೆ ಗಂಟೆಗೆ ವಿಜಯಪುರದತ್ತ ಪ್ರಯಾಣ ಬೆಳಸುವರು. ಜ.30ರಂದು ವಿಜಯಪುರದಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜಯಪುರದಲ್ಲೇ ವಾಸ್ತವ್ಯ ಹೂಡುವರು.
ಜ.31 ರಂದು ಮುಧೋಳ ವಿಧಾನಸಭೆ ಮತಕ್ಷೇತ್ರದ ಸ್ಥಳೀಯ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವರು ಎಂದು ಪ್ರಜಟಣೆಯಲ್ಲಿ ತಿಳಿಸಲಾಗಿದೆ.