ಉಪ ರಾಷ್ಟ್ರಪತಿ ಅವರನ್ನು ಅಣಕಿಸಿದ್ದನ್ನು ಖಂಡಿಸಿ ಚಿತ್ರದುರ್ಗದಲ್ಲಿ ಬಿಜೆಪಿ ಪ್ರತಿಭಟನೆ

ಹೊಸ ದಿಗಂತ ವರದಿ, ಚಿತ್ರದುರ್ಗ :

ಸಂಸತ್‌ನಲ್ಲಿ ಉಪ ರಾಷ್ಟ್ರಪತಿ ಜಗದೀಪ್ ಧನ್ಖರ್ ಅವರನ್ನು ಅಣುಕಿಸಿ, ಅದನ್ನು ವೀಡಿಯೋ ಮಾಡಿ ವಿಕೃತಿ ಮೆರದ ಪ್ರತಿಪಕ್ಷಗಳ ಸಂಸದರ ವಿರುದ್ದ ಗುರುವಾರ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಕಾಂಗ್ರೇಸ್ ಮತ್ತು ಟಿಎಂಸಿ ಸಂಸದರ ವಿರುದ್ದ ಘೋಷಣೆಗಳನ್ನು ಕೂಗಿದರು.

ಬಿಜೆಪಿ ಮಾಜಿ ಕಾರ್ಯದರ್ಶಿ ಮಲ್ಲಿಕಾರ್ಜನ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಸಂಸ್ತತಿನಲ್ಲಿ ಕಾಂಗ್ರೆಸ್ ತನ್ನ ವಿಕೃತಿಯನ್ನು ಮೆರದಿದೆ, ಅದೊಂದು ಪೂಜ್ಯನೀಯವಾದ ಜಾಗ ಅಲ್ಲಿ ಯಾವ ರೀತಿ ಇರಬೇಕೆಂದು ಕಾಂಗ್ರೆಸ್ ಸಂಸದರಿಗೆ ಗೋತ್ತಿಲ್ಲ, ಉಪ ರಾಷ್ಟ್ರಪತಿಗಳು ಸಂವಿಧಾನದ ಪರ್ಯಾಯ ವ್ಯಕ್ತಿಯಾಗಿದ್ದಾರೆ. ಸಂವಿಧಾನದ ಪರವಾಗಿ ಅಲ್ಲಿಯ ಪೀಠವನ್ನು ಆಲಂಕರಿಸಿದ್ದಾರೆ. ಅವರಿಗೆ ಎಲ್ಲರೂ ಗೌರವ ನೀಡಬೇಕಿದೆ. ಅದು ಬಿಟ್ಟು ಅವರನ್ನು ತೇಜೋವಧೆ ಮಾಡುವ ಕಾರ್ಯವನ್ನು ಮಾಡಿದ್ದಾರೆ ಇದನ್ನು ಬಿಜೆಪಿ ಖಂಡಿಸುತ್ತದೆ ಎಂದರು.

ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಅಧಿಕಾರವನ್ನು ಕಳೆದುಕೊಂಡು ಹತಾಶರಾಗಿ ಇಂದು ಏನು ಮಾಡಬೇಕೆಂದು ತಿಳಿಯದೆ ಉಪ ರಾಷ್ಟ್ರಪತಿಗಳಿಗೆ ಅವಮಾನ ಮಾಡುವ ಕೆಲಸವನ್ನು ಸಂಸತ್‌ನಲ್ಲಿ ಕಾಂಗ್ರೆಸ್ ಸಂಸದರು ಮಾಡಿದ್ದರೆ. ದೇಶ ಸಂವಿಧಾನದ ರೀತಿಯಲ್ಲಿ ನಡೆಯುತ್ತಿದೆ, ಅದರ ಪ್ರತಿನಿಧಿಯಾಗಿ ಉಪ ರಾಷ್ಟ್ರಪತಿಗಳು ಕೆಲಸವನ್ನು ಮಾಡುತ್ತಾರೆ ಎಂದು ಹೇಳಿದರು.

ಉಪರಾಷ್ಟ್ರಪತಿಗಳ ತೀರ್ಮಾನವನ್ನು ಕಾಂಗ್ರೆಸ್ ಪ್ರತಿಭಟಿಸುವ ಹಿನ್ನಲೆಯಲ್ಲಿ ಈ ರೀತಿ ಮಾಡಿದೆ ಇದು ಅತೀರೇಕಕ್ಕೆ ಹೋಗಿ ಬ್ಯಾನರ್ಜಿ ಎಂಬುವವರು ಉಪರಾಷ್ಟ್ರಪತಿಗಳನ್ನು ಮಿಮಿಕ್ರಿ ಮಾಡುತ್ತಾರೆ. ಆಪಹಾಸ್ಯವಾಗಿ ಅಣುಕು ಪ್ರದರ್ಶನವನ್ನು ಮಾಡುತ್ತಾg ಈ ಚಿತ್ರಿಕರಣವನ್ನು ರಾಹುಲ್ ಗಾಂಧಿಯವರು ಮಾಡುತ್ತಾರೆ. ಇದನ್ನು ದೇಶದ ಜನತೆ ನೋಡಿದ್ದಾರೆ. ಇದು ಖಂಡನೀಯ ವಿಚಾರವಾಗಿದೆ ಎಂದರು.

ಬೇರೆ ರಾಜ್ಯಗಳಲ್ಲಿ ಆಗಿರುವ ವಿವಿಧ ಘಟನೆಗಳಿಗೆ ಕಾಂಗ್ರೆಸ್ ಸರ್ಕಾರ ಪ್ರತಿಕ್ರಿಯೆಯನ್ನು ನೀಡಿದೆ ಅದರೆ ಬೆಳಗಾವಿಯಲ್ಲಿ ನಡೆದ ಮಹಿಳೆಯ ದೌರ್ಜನ್ಯದ ಬಗ್ಗೆ ಮಾತ್ರ ರಾಹುಲ್ ಗಾಂಧಿಯವರು ಇದುವರೆವಿಗೂ ಯಾವುದೇ ರೀತಿಯ ಮಾತನ್ನು ಸಹಾ ಆಡಿಲ್ಲ, ಇದು ನಾಚಿಕೇಯ ವಿಚಾರವಾಗಿದೆ ಎಂದ ಮುಂದಿನ ದಿನದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅತಿ ಕಡಿಮೆ ಸ್ಥಾನ ಸಿಗುತ್ತದೆ ಎಂಬ ವರದಿಯಂತೆ ಕಾಂಗ್ರೆಸ್ ಈ ರೀತಿಯಾಗಿ ಆಡುತ್ತಿದೆ ಎಂದರು.

ಈ ಪ್ರತಿಭಟನೆಯಲ್ಲಿ ಬಿಜೆಪಿ ವಕ್ತಾರರಾದ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಶಂಭು, ಪ್ರದೀಪ್, ಶೈಲಾ, ನಾಗರಾಜು, ಮನೋಜ್, ಪಾಂಡು, ಯಶವಂತ, ಕಿರಣ್, ಗೀರೀಶ್, ಲತಾ, ಸಂಜಯ್, ಕಾಂತರಾಜ್ ಪ್ರಕಾಶ್ ಓ ಗೌರಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!