ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೃಹ ಸಚಿವರ ಮನೆಮುಂದೆ ಬಿಜೆಪಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆ ಡಾ.ಜಿ. ಪರಮೇಶ್ವರ್ ಮನೆಗೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ.
ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಹಿನ್ನೆಲೆ ತುಮಕೂರಿನ ಹೆಗ್ಗೆರೆ ಬಳಿಯ ಸಿದ್ದಾರ್ಥ ನಗರದಲ್ಲಿರುವ ಪರಮೇಶ್ವರ್ ಮನೆಮುಂದೆ ಬೆಳಗ್ಗೆ 10:30ಕ್ಕೆ ಪ್ರತಿಭಟನೆ ನಡೆಸಲು ಜಿಲ್ಲಾ ಬಿಜೆಪಿ ಘಟಕ ಕರೆ ನೀಡಿದೆ. ಪ್ರತಿಭಟನೆ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.