ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ್ದು, ಬಿಜೆಪಿ ನಾಯಕ ಅಣ್ಣಾಮಲೈ ಅವರಿಗೆ ಈ ಬಾರಿ ಟಿಕೆಟ್ ಮಿಸ್ ಆಗಿದ್ದು, ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಶುರುವಾಗಿದೆ. ಇದರ ನಡುವೆ ಕೆ. ಅಣ್ಣಾಮಲೈ ಬಿಗ್ ರಿಯಾಕ್ಷನ್ ನೀಡಿದ್ದು, ಬಿಜೆಪಿ ಹೈಕಮಾಂಡ್ ನನಗೆ ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ಜವಾಬ್ದಾರಿ ನೀಡಿದ್ದು, ನಾನು ನಾಡಿನ ಮೂಲೆ ಮೂಲೆಗೂ ತೆರಳಿ ಎನ್ಡಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.
ಈ ಕುರಿತು ಕೇರಳದ ಕಣ್ಣೂರಿನಲ್ಲಿ ಮಾಧ್ಯುಮಗಳೊಂದಿಗೆ ಮಾತನಾಡಿದ ಕೆ. ಅಣ್ಣಾಮಲೈ, ತಮಿಳುನಾಡಿನಾದ್ಯಂತ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದು ನನ್ನ ಜವಾಬ್ದಾರಿ. ಸದ್ಯ ನಾನು ಪುದುಚೇರಿ ಮತ್ತು ಕೇರಳದಲ್ಲಿ ಪ್ರಚಾರ ಮಾಡುತ್ತಿದ್ದೇನೆ . 7ರಿಂದ 23 ರವರೆಗೆ ತಮಿಳುನಾಡಿನಾದ್ಯಂತ ಎಲ್ಲಾ ಬಿಜೆಪಿ ಮತ್ತು ಎನ್ಡಿಎ ಅಭ್ಯರ್ಥಿಗಳ ಪರ ಪ್ರಚಾರ ಮಾಡಬೇಕು. ಬಿಜೆಪಿ ಹೈಕಮಾಂಡ್ ನನಗೆ ಈ ಜವಾಬ್ದಾರಿ ನೀಡಿದ್ದು, ನಾನು ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.
ಅಣ್ಣಾಮಲೈ ಅವರ ಮಾತಿಗೆ ಜನರಿಂದ ಮೆಚ್ಚುಗೆಗೆ ವ್ಯಕ್ತವಾಗಿದ್ದು, ತಮಿಳುನಾಡಿನ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಚೈತನ್ಯವನ್ನು ತುಂಬಲಿದೆ.



