September 29, 2026
Tuesday, September 29, 2026
spot_img

ಇರಾನ್ ನಿಂದ ಭಾರತದತ್ತ ಹೊರಟ ಕಚ್ಚಾ ತೈಲ ಹೊತ್ತ ಹಡಗು ಚೀನಾದ ಕಡೆ ಯು ಟರ್ನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯ ಪ್ರಾಚ್ಯದಲ್ಲಿನ ಸಂಘರ್ಷ ನಡುವೆ ಇರಾನ್​ನಿಂದ ಭಾರತದ ಕಡೆ ಕಚ್ಚಾ ತೈಲ ಹೊತ್ತು ಹೊರಟ್ಟಿದ್ದ ಹಡಗು ಚೀನಾದತ್ತ ಸಾಗಿದೆ.

2002ರಲ್ಲಿ ನಿರ್ಮಿಸಲಾದ ಅಫ್ರಾಮ್ಯಾಕ್ಸ್ ಟ್ಯಾಂಕರ್ ಪಿಂಗ್ ಶುನ್ ಹಡಗು ಇರಾನ್​ ನಿಂದ ನೇರ ಗುಜರಾತ್‌ನ ವಾಡಿನಾರ್ ಬಂದರಿಗೆ ಆಗಮನವನ್ನು ಸೂಚಿಸಿತ್ತು. ಆದರೆ, ಇದೀಗ ತನ್ನ ದಿಕ್ಕನ್ನು ಬದಲಾಯಿಸಿ ಚೀನಾದ ಕಡೆಗೆ ಹೊರಟಿದೆ ಎಂದು ಕೆಪ್ಲರ್‌ ಹಡಗು ಟ್ರ್ಯಾಕಿಂಗ್‌ ಸಂಸ್ಥೆ ತಿಳಿಸಿದೆ.

ಆಫ್ರಿಕಾದ ಈಸ್ವತಿನಿ ದೇಶದ ಧ್ವಜ ಹೊತ್ತ ಪಿಂಗ್ ಶುನ್ ಹಡಗು ಸ್ವಯಂಚಾಲಿತ ಗುರುತಿನ ವ್ಯವಸ್ಥೆಯನ್ನು ಹೊಂದಿದ್ದು, ಆದರೆ ಏಕಾಏಕಿ ತನ್ನ ದಿಕ್ಕನ್ನು ಬದಲಾಯಿಸಿ ಚೀನಾದ ಕಡೆಗೆ ತೆರಳುತ್ತಿದೆ ಎಂದು ಹಡಗು ಟ್ರ್ಯಾಕಿಂಗ್‌ ಸಂಸ್ಥೆ ಮಾಹಿತಿ ನೀಡಿದ್ದು, ಈ ಕುರಿತು ಯಾವುದೇ ನಿಖರ ಕಾರಣ ಖಚಿತವಾಗಿಲ್ಲ.

ಕೆಲ ಅಧಿಕಾರಿಗಳು ಹೇಳುವಂತೆ, ಗುಜರಾತ್‌ನ ವಾಡಿನಾರ್ ಬಂದರಿಗೆ ಯಾವುದೇ ಟ್ಯಾಂಕರ್‌ ಬರಲು ಶಿಷ್ಟಾಚಾರವಿದ್ದು, ಅಂತಾರಾಷ್ಟ್ರೀಯ ಬಂದರುಗಳಲ್ಲಿ ದಾಖಲೆಗಳನ್ನೂ ಪೂರ್ಣಗೊಳಿಸಬೇಕಿದೆ. ಆದರೆ ಪಿಂಗ್ ಶುನ್‌‌ ಟ್ಯಾಂಕರ್‌ ವಿಮೆ, ಕಾರ್ಯಾಚರಣೆ ಸಿಬ್ಬಂದಿ ಹಾಗೂ ದಾಖಲೆಗಳಲ್ಲಿ ವ್ಯತ್ಯಾಸ ಇದ್ದೀರ ಬಹುವುದು . ಅದಕ್ಕಾಗಿ ಮಾರ್ಗ ಬದಲಾವಣೆ ಮಾಡಿರಬೇಕು ಎಂದು ತಿಳಿಸಿದ್ದಾರೆ.

Must Read