ಗೋಮೂತ್ರ ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಗೆಲ್ಲುತ್ತದೆ: ನಾಲಿಗೆ ಹರಿಬಿಟ್ಟ ಡಿಎಂಕೆ ಸಂಸದ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
 
ಲೋಕಸಭೆಯಲ್ಲಿ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವು ಪ್ರಸ್ತಾಪಿಸಿ ಲೋಕಸಭೆಯಲ್ಲಿ ಮಾತನಾಡಿದ ಡಿಎಂಕೆ ಸಂಸದ ಸೆಂಥಿಲ್ ಕುಮಾರ್, ‘ಗೋಮೂತ್ರ ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಗೆಲ್ಲುತ್ತದೆ ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಡಿಎಂಕೆ ಸಂಸದ (DMK MP) ಡಾ.ಡಿಎನ್ವಿ ಸೆಂಥಿಲ್ ಕುಮಾರ್ (Dr. DNV Senthil Kumar) ಬಿಜೆಪಿ (BJP) ವಿರೋಧಿಸುವ ಭರದಲ್ಲಿ ಗೋಮೂತ್ರ ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಗೆದ್ದಿದೆಎಂದು ಹೇಳಿದ್ದಾರೆ. ಲೋಕಸಭಾ ಅಧಿವೇಶನದಲ್ಲಿ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ 2023 ಕುರಿತು ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ಮಾತನಾಡಿದರು. ಈ ವೇಳೆ ಹಿಂದಿ ಹೃದಯಭಾಗದಲ್ಲಿರುವ ರಾಜ್ಯಗಳನ್ನು ಗೋಮೂತ್ರ ರಾಜ್ಯಗಳು ಎಂದು ಕರೆದಿದ್ದಾರೆ.

ಬಿಜೆಪಿಯ ಶಕ್ತಿಯು ಮುಖ್ಯವಾಗಿ ನಾವು ಸಾಮಾನ್ಯವಾಗಿ ಗೋಮೂತ್ರ ರಾಜ್ಯಗಳು ಎಂದು ಕರೆಯುವ ಹಿಂದಿಯ ಹೃದಯಭಾಗದ ರಾಜ್ಯಗಳಲ್ಲಿ ಚುನಾವಣೆಗಳನ್ನು ಗೆಲ್ಲುವುದು ಮಾತ್ರ ಎಂದು ಈ ದೇಶದ ಜನರು ಭಾವಿಸಬೇಕು. ಗೆಲ್ಲಲಾಗದ ದಕ್ಷಿಣದ ರಾಜ್ಯಗಳನ್ನು ಕೇಂದ್ರ ಸರ್ಕಾರವು ಕೇಂದ್ರಾಡಳಿತ ಪ್ರದೇಶ ಮಾಡಬಹುದು. ಈ ರಾಜ್ಯಗಳ ಮೇಲೆ ಪರೋಕ್ಷ ಆಡಳಿತ ಹೊಂದಲು ಬಿಜೆಪಿಯು ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕವನ್ನು ಕೇಂದ್ರಾಡಳಿತ ಪ್ರದೇಶ ಅಂತ ಘೋಷಿಸಬಹುದು ಎಂದು ಹೇಳಿದರು.

ಇದರ ಬೆನ್ನಲ್ಲೇ ಸಂಸದರ ವಿರುದ್ಧ ಬಿಜೆಪಿ ಮುಗಿಬಿದ್ದಿದ್ದು, ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ,’ಇದು ಸನಾತನಿ ಸಂಪ್ರದಾಯದ ಅಗೌರವ ಎಂದು ನಾನು ಭಾವಿಸುತ್ತೇನೆ. ಡಿಎಂಕೆ ಶೀಘ್ರದಲ್ಲೇ ‘ಗೋಮೂತ್ರ’ದ ಪ್ರಯೋಜನಗಳನ್ನು ತಿಳಿಯಲಿದೆ. ಇದನ್ನು ದೇಶದ ಜನರು ಸಹಿಸುವುದಿಲ್ಲ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ ಎಂದು ವಾಗ್ದಾಳಿ ನಡೆಸಿದರು.

ಈ ಹಿಂದೆ ತಮಿಳುನಾಡು ಸಚಿವ (Tamil Nadu Minister) ಉದಯನಿಧಿ ಸ್ಟಾಲಿನ್ (Udayanidhi Stalin) ಸನಾತನ ಧರ್ಮ (Sanatana Dharma) ವಿರೋಧಿ ಹೇಳಿಕೆ ಪ್ರಕರಣ ಹಸಿರಾಗಿರುವಂತೆಯೇ ಇತ್ತ ಅದೇ ಪಕ್ಷದ ಮತ್ತೋರ್ವ ನಾಯಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!