Friday, November 14, 2025

ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಭರ್ಜರಿ ಜಯಭೇರಿ: ಚುನಾವಣೆ ಗೆದ್ದೇಬಿಟ್ರು ದೇವಯಾನಿ ರಾಣಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀನಗರದ ನವ ಘಟ್ಟದಲ್ಲಿ ಹಾಗೂ ಬಿಹಾರದ ಚುನಾವಣಾ ಫಲಿತಾಂಶಗಳ ನಡುವೆ ಸ್ವಲ್ಪ ಅವಕಾಶಗಳಿದ್ದರೂ, ಬಿಜೆಪಿ ನೇತೃತ್ವದ National Democratic Alliance (ಎನ್‌ಡಿಎ) ಈಗ ಭರ್ಜರಿ ಗೆಲುವಿನ ಹಾದಿಯಲ್ಲಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 199 ಸ್ಥಾನಗಳಲ್ಲಿ ಮುನ್ನಡೆ ಹೊಂದಿರುವ ಎನ್‌ಡಿಎ ಜೊತೆಗೆ, ಜಮ್ಮು–ಕಾಶ್ಮೀರದ ನಾಗ್ರೋಟ ಉಪ ಚುನಾವಣೆಯಲ್ಲಿಯೂ ಬಿಜೆಪಿ ಉತ್ಕೃಷ್ಟ ಪ್ರದರ್ಶನ ನೀಡಿದೆ. ನಾಗ್ರೋಟ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದೇವಯಾನಿ ರಾಣಾ 24,647 ಮತದ ಭಾರಿ ಅಂತರದ ಜಯ ಸಾಧಿಸಿದ್ದಾರೆ.

ನಾಗ್ರೋಟ ಉಪ ಚುನಾವಣೆಯಲ್ಲಿ ಜಯದ ಸಂಭ್ರಮದಲ್ಲಿದ್ದ ದೇವಯಾನಿ ರಾಣಾ, “ನಮ್ಮ ಕುಟುಂಬದ ಪರಂಪರೆ, ಈ ಜನರ ಬೆಂಬಲ ಇಲ್ಲದೆ ಸಾಧ್ಯವಾಗಲಿಲ್ಲ” ಎಂಬ ಮಾತುಗಳಿಂದ ಭಾವುಕರಾಗಿದ್ದರು. ಇವರ ತಂದೆ ದೇವೇಂದ್ರ ಸಿಂಗ್ ರಾಣಾ ಈ ಕ್ಷೇತ್ರದ ಮಾಜಿ ಶಾಸಕರಾಗಿದ್ದು, ಅಕಾಲಿಕ ಮರಣದಿಂದ ಶಾಸಕ ಸ್ಥಾನ ತೆರವಾಗಿತ್ತು. ತೆರವಾಗಿರುವ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾದಾಗ ಬಿಪಿಪಿ ಪುತ್ರಿ ದೇವಯಾನಿ ರಾಣಾಗೆ ಟಿಕೆಟ್ ನೀಡಿದ್ದರು. ಕೇವಲ ಒಂದು ವರ್ಷದ ಹಿಂದೆ ಸಕ್ರೀಯ ರಾಜಕಾರಣಕ್ಕೆ ದೇವಯಾನಿ ರಾಣ ಎಂಟ್ರಿಕೊಟ್ಟಿದ್ದರು. ಭಾರತೀಯ ಜನತಾ ಪಾರ್ಟಿಯ ಯು ಮೊರ್ಚಾ ಉಪಾಧ್ಯಕ್ಷ ಜವಾಬ್ದಾರಿಯನ್ನು ನೀಡಲಾಗಿತ್ತು.

error: Content is protected !!