Friday, January 9, 2026

ಬಿಜೆಪಿ ಕಾರ್ಯಕರ್ತೆ ವಿವಸ್ತ್ರಗೊಳಿಸಿದ ಪ್ರಕರಣ: ಪೊಲೀಸ್‌ ಅಧಿಕಾರಿಗಳ ಅಮಾನತಿಗೆ ತೆಂಗಿನಕಾಯಿ ಆಗ್ರಹ

ಹೊಸದಿಗಂತ ವರದಿ ಹುಬ್ಬಳ್ಳಿ :

ಪ್ರಕರಣವೊಂದರ ಸಂಬಂಧ ಬಿಜೆಪಿ ಕಾರ್ಯಕರ್ತೆಯೋರ್ವಳನ್ನು ಬಂಧನದ ವೇಳೆ ಪೊಲೀಸರು ವಿವಸ್ತ್ರಗೊಳಿಸಿರುವ ಆರೋಪದ ಕುರಿತಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಮಹೇಶ ತೆಂಗಿನಕಾಯಿ, ಈ ಘಟನೆಯಲ್ಲಿ ಆರೋಪಕ್ಕೆ ಒಳಗಾಗಿರುವ ಪೊಲೀಸ್ ಅಧಿಕಾರಿಗಳನ್ನು ತಕ್ಷಣ ಅಮಾನತ್ತುಗೊಳಿಸುವಂತೆ ಆಗ್ರಹ ಮಾಡಿದ್ದಾರೆ.

ನೊಂದ ಕುಟುಂಬಕ್ಕೆ ಭೇಟಿ ನೀಡಿದ ನಂತರದಲ್ಲಿ ಹೇಳಿಕೆ ನೀಡಿರುವ ಅವರು, ಗೃಹ ಸಚಿವರಿಗೆ ತಮ್ಮ ಬದ್ಧತೆಯನ್ನು ತೋರಿಸುವ ಕ್ಷಣ ಈಗ ಬಂದಿದೆ. ಓರ್ವ ಮಹಿಳೆಯ ಮೇಲೆ ಈ ರೀತಿ ಪೊಲೀಸರು ಅಮಾನುಷವಾಗಿ ವರ್ತನೆ ಮಾಡಿರುವುದು ಅಕ್ಷಮ್ಯ. ಈ ಬಗ್ಗೆ ನಿಷ್ಪಕ್ಷವಾಗಿ ತನಿಖೆ ಆಗಲಿ. ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಪೊಲೀಸರೇ ಈರೀತಿ ವರ್ತನೆ ನಡೆಸಿದ್ದು, ಮಹಿಳೆಯರಿಗೆ ರಕ್ಷಣೆ ಇಲ್ಲ ಎನ್ನುವುದು ಸಾಬೀತಾಗಿದೆ ಎಂದು ದೂರಿದ್ದಾರೆ.

error: Content is protected !!