ಹೊಸದಿಗಂತ ವರದಿ, ಗದಗ :
ವಿಧಾನಸಭೆಯ ಚುನಾವಣೆಯ ಸೋಲಿನಿಂದಾಗಿ ಬಿಜೆಪಿಯು ಉತ್ಸಾಹ ಕಳೆದುಕೊಂಡಿದ್ದು ಅದರಿಂದ ವಿರೋಧ ಪಕ್ಷದ ನಾಯಕರನ್ನಾಗಿ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಈ ಹಿಂದೆ ಪಕ್ಷ ತೊರೆದು ಹೋದ ೧೭ ಜನರಲ್ಲಿ ಯಾರನ್ನಾದರೂ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ.ಪಾಟೀಲ ಅವರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಬಿಜೆಪಿಯಲ್ಲಿ ವಿರೋಧ ಪಕ್ಷ ನಾಯಕ ಆಯ್ಕೆ ವಿಚಾರ ಕುರಿತು ಮಾತನಾಡಿದ ಅವರು ಬಿಜೆಪಿಯವರು ಸೋಲು ಅನುಭವಿಸಿದ್ದಾರೆ.ಅದರಿಂದ ಸಂಪೂರ್ಣ ನೈತಿಕ ಕುಸಿತ ಕಂಡಿದ್ದಾರೆ. ಮತ್ತು ಅವರಲ್ಲಿ ಉತ್ಸಾಹ ಕಮರಿ ಹೋಗಿ ಬಿಟ್ಟಿದೆ. ಅದು ಅವರ ಪಕ್ಷದ ವಿಚಾರ ನಾನು ಈ ಬಗ್ಗೆ ಟೀಕೆ ಟಿಪ್ಪಣಿ ಮಾಡುವದಿಲ್ಲ ಈ ಹಿಂದೆ ಕಾಂಗ್ರೆಸ್ ತೊರೆದು ಹೋದ ೧೭ ಜನರಲ್ಲಿ ಯಾರಾನ್ನಾದರೂ ಮಾಡಲಿ, ಇನ್ನೂ ಮುಂದೆ ನಮ್ಮ ಪಕ್ಷದಿಂದ ಯಾರು ಹೋಗುವರು ಇಲ್ಲ ಎಂದು ಸಚಿವ ಡಾ. ಎಚ್.ಕೆ.ಪಾಟೀಲ ಅವರು ಲೇವಡಿ ಮಾಡಿದರು.