ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎರಡು ದಿನಗಳ ಭೇಟಿ ನೀಡಿದ್ದು, ಈ ವೇಳೆ ರಾಹುಲ್ ಗಾಂಧಿ ತಮ್ಮ ಇತ್ತೀಚಿನ ಮಣಿಪುರ ಭೇಟಿಯ ಬಗ್ಗೆ ಚರ್ಚಿಸಿದ್ದಾರೆ. ಬಿಜೆಪಿ ದೇಶ ಹೊಡೆಯುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ವಯನಾಡ್’ನಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಎಲ್ಲೆಡೆ ರಕ್ತವಿದೆ, ಎಲ್ಲೆಡೆ ಕೊಲೆ ಮತ್ತು ಎಲ್ಲೆಡೆ ಅತ್ಯಾಚಾರ ನಡೆಯುತ್ತಿದೆ. ಮಣಿಪುರದ ಪರಿಸ್ಥಿತಿ ಹೀಗಿದೆ, ಮತ್ತು ಪ್ರಧಾನಿಯವರು ಸಂಸತ್ತಿನಲ್ಲಿ 2 ಗಂಟೆ 13 ನಿಮಿಷಗಳ ಕಾಲ ಮಾತನಾಡಿದರು. ಆದ್ರೆ, ಮಣಿಪುರದ ಬಗ್ಗೆ ಕೇವಲ 2 ನಿಮಿಷಗಳ ಮಾತ್ರ ಮಾತನಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Wayanad, Kerala: Congress MP Rahul Gandhi says, "There is blood everywhere, there is murder everywhere, rape everywhere. That is the situation in Manipur and the Prime Minister spoke for 2 hours, 13 minutes in Parliament but he spoke on Manipur for 2 minutes. He laughed, joked.… pic.twitter.com/nzbwA8taFp
— ANI (@ANI) August 12, 2023