ಪ್ರತಿ ವರ್ಷ ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನ (World Blood Donor Day) ಆಚರಿಸಲಾಗುತ್ತೆ ಯಾಕೆ ಗೊತ್ತಾ ? ಈ ದಿನ ರಕ್ತದಾನಿಗಳ ನಿಸ್ವಾರ್ಥ ಸೇವೆಗೆ thank you ಹೇಳುವ ದಿನ ಮಾತ್ರವಲ್ಲ, ಉಳಿದವರಿಗೆ ಪ್ರೇರಣೆಯ ನೀಡುವ ಪ್ರಮುಖ ಅವಕಾಶವೂ ಹೌದು. ರಕ್ತದಾನ ಅನ್ನೋದು ಕೇವಲ ಇನ್ನೊಬ್ಬರ ಜೀವ ಉಳಿಸಲು ನೆರವಾಗುವ ಮಾನವೀಯತೆಯ ಕೆಲಸ ಅಲ್ಲ, ಅದು ರಕ್ತ ಕೊಡುವ ದಾನಿಯ ದೇಹಕ್ಕೂ ಅನೇಕ ಆರೋಗ್ಯ ಲಾಭಗಳನ್ನು ನೀಡುತ್ತದೆ.
ಇತರರ ಜೀವ ಉಳಿಸಲು ನೀವು ಕಾರಣಕಾರರಾಗಬಹುದು
ಪ್ರತಿ ರಕ್ತದಾನವೂ ಮೂರು ಜನರ ಜೀವ ಉಳಿಸಬಲ್ಲಷ್ಟು ಶಕ್ತಿಯಿದೆ. ಅಪಘಾತಗಳು, ಶಸ್ತ್ರಚಿಕಿತ್ಸೆ, ರಕ್ತಹೀನತೆ ಮತ್ತು ಕ್ಯಾನ್ಸರ್ನಂತಹ ರೋಗಗಳಿಂದ ಬಳಲುವವರು ರಕ್ತದಾನದಿಂದ ತಕ್ಷಣ ನೆರವು ಪಡೆದುಕೊಳ್ಳಬಹುದು.
ಹೃದಯ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ
ನಿಯಮಿತವಾಗಿ ರಕ್ತದಾನ ಮಾಡುವುದರಿಂದ ರಕ್ತದಲ್ಲಿನ iron ಮಟ್ಟ ನಿಯಂತ್ರಣವಾಗುತ್ತದೆ. ಇದು ಹೃದಯಾಘಾತ, ಸ್ಟ್ರೋಕ್ ಮತ್ತು ಇತರ ಹೃದಯ ಸಂಬಂಧಿತ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಹೊಸ ರಕ್ತಕಣಗಳ ಉತ್ಪತ್ತಿಗೆ ಉತ್ತೇಜನ
ರಕ್ತದಾನ ಮಾಡಿದ ನಂತರ ದೇಹ ಹೊಸ ರಕ್ತಕಣಗಳನ್ನು ತಯಾರಿಸಲು ಪ್ರೇರಿತವಾಗುತ್ತದೆ. ಇದು ರಕ್ತದ ಸಂಚಲನವನ್ನು ಉತ್ತೇಜಿಸಿ ದೇಹವನ್ನು ಚುರುಕಾಗಿಡುತ್ತದೆ.
ದೇಹದ ಇನ್ಫೆಕ್ಷನ್ಗಳಿಂದ ರಕ್ಷಣೆ
ರಕ್ತದಾನ ಮಾಡುವ ಮುನ್ನ ಆರೋಗ್ಯ ತಪಾಸಣೆ ಆಗುತ್ತದೆ. ಹೀಗಾಗಿ, ನಿಮ್ಮ ದೇಹದಲ್ಲಿ ಯಾವುದೇ ಇನ್ಫೆಕ್ಷನ್ ಇದ್ದರೆ ಮೊದಲೇ ಪತ್ತೆಯಾಗುವ ಸಾಧ್ಯತೆ ಇದೆ.
ಮಾನಸಿಕ ತೃಪ್ತಿ ಮತ್ತು ಸಮಾಜದ ಒಳಿತಿಗೆ ಕೊಡುಗೆ
ರಕ್ತದಾನ ಮಾಡುವಾಗ ನಾವು ಇತರರಿಗಾಗಿ ಏನಾದರೂ ಮಾಡುತ್ತಿದ್ದೇವೆ ಎಂಬ ಆತ್ಮತೃಪ್ತಿ ಸಿಗುತ್ತದೆ. ಇದು ದಾನಿಯ ಮಾನಸಿಕ ಆರೋಗ್ಯಕ್ಕೂ ಉತ್ತಮ.
ರಕ್ತದಾನವೇ ನಿಜವಾದ ಜೀವದಾನ. ಅದು ಇತರರ ಜೀವ ಉಳಿಸುವುದಷ್ಟೇ ಅಲ್ಲ, ನಿಮ್ಮ ಆರೋಗ್ಯಕ್ಕೂ ನೆರವಾಗುತ್ತದೆ. ಪ್ರತಿವರ್ಷವೂ ಅಥವಾ ಸಾಧ್ಯವಾದಾಗಲೆಲ್ಲಾ ರಕ್ತದಾನ ಮಾಡುವ ಮೂಲಕ ನೀವು ಸಮಾಜಕ್ಕೆ ಶ್ರೇಷ್ಠ ಕೊಡುಗೆ ನೀಡಬಹುದು.