ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿಯರವೇನಾದ್ರೂ ಸಂವಿಧಾನ ಬದಲಾವಣೆ ಮಾಡೋಕೆ ಹೋದ್ರೆ ದೇಶದಲ್ಲಿ ರಕ್ತಪಾತ ಆಗತ್ತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರ ಸಂವಿಧಾನ ಬದಲಾವಣೆ ಹೇಳಿಕೆಗೆ ಸಿಎಂ ಗರಂ ಆಗಿದ್ದಾರೆ.
ಹೆಗಡೆ ಈ ಹಿಂದೆ ಕೂಡ ಸಂವಿಧಾನ ಬದಲಾವಣೆ ಬಗ್ಗೆ ಹೇಳಿಕೆ ನೀಡಿದ್ದರು. ಆಗ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿದ್ದರು. ಆಗಲೂ ಯಾರೂ ಕ್ರಮ ಕೈಗೊಂಡಿಲ್ಲ ಎಂದರು.
ಕಾಂಗ್ರೆಸ್ ಆಡಳಿತದಲ್ಲಿ ಸಂವಿಧಾನ ತಿರುಚಿದ್ದಾರೆ. ಬೇಡದ ವಿಷಯಗಳನ್ನು ಸೇರಿಸಿದ್ದಾರೆ. ಅಂತವುಗಳನ್ನು ಸರಿಪಡಿಸಬೇಕಿದೆ. ಇದಕ್ಕೆ ಲೋಕಸಭೆಯಲ್ಲೂ ನಮಗೆ ಬಹುಮತ ಬೇಕಿದೆ ಎಂದು ಹೆಗಡೆ ಹೇಳಿದ್ದರು.