ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಹ್ಯಾಕಾಶ ಆಧಾರಿತ ಬ್ರಾಡ್‌ಬ್ಯಾಂಡ್ ತಂತ್ರಜ್ಞಾನದಲ್ಲಿ ಪ್ರಮುಖ ಮೈಲಿಗಲ್ಲನ್ನು ಸ್ಥಾಪಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಜ್ಜಾಗಿದೆ.
ಕ್ರಿಸ್‌ಮಸ್ ಹಬ್ಬದಂದು ಬಾಹುಬಲಿ ರಾಕೆಟ್ ಮೂಲಕ ಎಲ್ ವಿಎಂ3 ಉಡಾವಣೆ ಮಾಡಲು ಸಿದ್ಧತೆ ನಡೆಸಿದೆ. ಇಸ್ರೋ ತನ್ನ ಆರನೇ ಕಾರ್ಯಾಚರಣೆಯಾದ ಎಲ್ ವಿಎಂ3 ಹಾರಾಟದಲ್ಲಿ ಅತ್ಯಂತ ಭಾರವಾದ ವಾಣಿಜ್ಯ ಸಂವಹನ ಉಪಗ್ರಹವಾದ ಬ್ಲೂಬರ್ಡ್ ಬ್ಲಾಕ್- 2 ಅನ್ನು ಲೋ-ಅರ್ಥ್ ಕಕ್ಷೆಯಲ್ಲಿ ಸೇರಿಸಲು ಸಜ್ಜಾಗಿದೆ.
ದೇಶದ ವಾಣಿಜ್ಯ ಉಪಗ್ರಹ ಉಡಾವಣೆಯಲ್ಲಿ ಇದೊಂದು ಗಮನಾರ್ಹ ಪ್ರಗತಿಯಾಗಿದೆ. ಇಸ್ರೋ ತನ್ನ ಲಾಂಚ್ ವೆಹಿಕಲ್ ಮಾರ್ಕ್-III-ಎಂ6 ನಲ್ಲಿ ಬ್ಲೂಬರ್ಡ್ ಬ್ಲಾಕ್-2 ಉಪಗ್ರಹವನ್ನು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಮತ್ತು ಸ್ಪೇಸ್‌ಮೊಬೈಲ್‌ನ ಹಿಂದಿನ ಕಂಪನಿಯಾದ ಎಎಸ್ ಟಿ ಅಂಡ್ ಸೈನ್ಸ್ ಸಹಯೋಗದೊಂದಿಗೆ ಡಿಸೆಂಬರ್ 24ರಂದು ಬೆಳಗ್ಗೆ 8.54ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಎರಡನೇ ಉಡಾವಣಾ ಪ್ಯಾಡ್‌ನಿಂದ ಉಡಾವಣೆ ಮಾಡಲಿದೆ.
ಯುಎಸ್ ಮೂಲದ ಬ್ಲೂಬರ್ಡ್ ಬ್ಲಾಕ್-2 ಉಪಗ್ರಹವು ಸ್ಮಾರ್ಟ್‌ಫೋನ್‌ಗಳನ್ನು ನೇರವಾಗಿ ಉಪಗ್ರಹ ಸಂಪರ್ಕ ಕಲ್ಪಿಸುವ ವಿಶ್ವದ ಮೊದಲ ಬಾಹ್ಯಾಕಾಶ ಆಧಾರಿತ ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಅನ್ನು ಒದಗಿಸಲಿದೆ.

