May 27, 2026
Wednesday, May 27, 2026
spot_img

FOOD | ಬಿಸಿಬಿಸಿ ಅನ್ನಕ್ಕೆ ಈ ಪೀನಟ್ ಚಟ್ನಿ ಅದೇನ್ ಕಾಂಬಿನೇಷನ್ ಅಂತೀರಾ! ಅದ್ಭುತ

ಬಿಸಿಬಿಸಿ ಅನ್ನಕ್ಕೆ ತುಪ್ಪ ಹಾಕಿಕೊಂಡು ತಿನ್ನೋವಾಗ ಜೊತೆಗೆ ಒಂದು ಸಿಂಪಲ್ ಆದರೂ ರುಚಿಯಾದ ಚಟ್ನಿ ಇದ್ದರೆ ಊಟಕ್ಕೆ ಇನ್ನಷ್ಟು ರುಚಿ ಬರುತ್ತೆ. ಅಂಥಾ ಸವಿಯನ್ನು ನೀಡೋದು ಪೀನಟ್ ಚಟ್ನಿ. ಕಡಿಮೆ ಪದಾರ್ಥಗಳಲ್ಲಿ, ಕಡಿಮೆ ಸಮಯದಲ್ಲಿ ಮಾಡಬಹುದಾದ ಈ ಚಟ್ನಿ ಅನ್ನ, ದೋಸೆ, ಚಪಾತಿ ಎಲ್ಲದಕ್ಕು ಸೂಪರ್ ಕಾಂಬಿನೇಷನ್ ಆಗಿರುತ್ತೆ. .

ಬೇಕಾಗುವ ಪದಾರ್ಥಗಳು:

ಕಡಲೆಕಾಯಿ (ಪೀನಟ್) – 1 ಕಪ್
ಒಣ ಮೆಣಸಿನಕಾಯಿ – 3 ರಿಂದ 4
ಬೆಳ್ಳುಳ್ಳಿ – 3 ಕಳಿ
ಹುಣಸೆಹಣ್ಣು – ಚಿಕ್ಕ ತುಂಡು
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 1 ಚಮಚ

ಒಗ್ಗರಣೆಗೆ:
ಸಾಸಿವೆ – ಅರ್ಧ ಚಮಚ
ಉದ್ದಿನಬೇಳೆ – ಅರ್ಧ ಚಮಚ
ಕರಿಬೇವು – ಸ್ವಲ್ಪ

ಮಾಡುವ ವಿಧಾನ:

ಮೊದಲು ಒಂದು ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಡಲೆಕಾಯಿಯನ್ನು ಹುರಿದುಕೊಳ್ಳಿ. ನಂತರ ಅದಕ್ಕೆ ಒಣ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನು ಹಾಕಿ ಸ್ವಲ್ಪ ಹೊತ್ತು ಹುರಿದು ತಂಪಾಗಲು ಬಿಡಿ.

ಈ ಮಿಶ್ರಣ ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಹಾಕಿ, ಹುಣಸೆಹಣ್ಣು, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಮೃದುವಾಗಿ ರುಬ್ಬಿಕೊಳ್ಳಿ.

ಒಂದು ಚಿಕ್ಕ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನಬೇಳೆ ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ, ರುಬ್ಬಿದ ಚಟ್ನಿಗೆ ಸೇರಿಸಿ. ಬಿಸಿ ಅನ್ನಕ್ಕೆ ಈ ಪೀನಟ್ ಚಟ್ನಿ ಹಾಕಿ ತಿಂದರೆ ಸಿಂಪಲ್ ಊಟ ಕೂಡ ತುಂಬಾ ರುಚಿಯಾಗಿಬಿಡುತ್ತೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !