ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಹ್ಯಾಕಾಶದಿಂದ ಭೂಮಿಗೆ ಮರಳಿದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ರಿಗೆ ಬಿಎಮ್ಆರ್ಸಿಎಲ್ ಅಭಿನಂದನೆಯ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿತ್ತು. ಆದರೆ ಈ ಪೋಸ್ಟ್ ಗೆ ಮೆಚ್ಚುಗೆ ವ್ಯಕ್ತವಾಗುವ ಬದಲು ಹತಾಶಗೊಂಡ ಪ್ರಯಾಣಿಕರಿಂದ ಟೀಕೆಗಳು ಬಂದಿದೆ.
ಟಿಕೆಟ್ ದರ ಏರಿಕೆ ಹೊಸ ಮಾರ್ಗಗಳ ವಿಳಂಬ ಸೇರಿದಂತೆ ಹಲವು ವಿಷಯಗಳ ಬಗ್ಗೆ ಕಮೆಂಟ್ ನಲ್ಲಿ ಪ್ರಸ್ತಾಪಿಸಿರುವ ಪ್ರಯಾಣಿಕರು ಮೊದಲು ನಿಮ್ಮ ಕೆಲಸದ ಬಗ್ಗೆ ಗಮನ ಹರಿಸಿ ಎಂದು ಹೇಳಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಎಮ್ಆರ್ಸಿಎಲ್ ಗಗನಯಾತ್ರಿಗಳಿಗೆ ಭೂಮಿಗೆ ಸ್ವಾಗತ ನಿಮ್ಮ ಸಾಧನೆ ನಮಗೆ ಹೆಮ್ಮೆ ಪಡುವಂತೆ ಮಾಡಿದೆ ಎಂದು ಬರೆದುಕೊಂಡಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು ಮೆಟ್ರೋ ದರ ಯಾವಾಗ ಭೂಮಿಗೆ ಬರುತ್ತದೆ ಎಂದು ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ನಿಮ್ಮ ಸಾಧನೆಗಳ ಬಗ್ಗೆ ನಾವು ಹೆಮ್ಮೆ ಪಡಬೇಕೆಂದು ನೀವು ಭಾವಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಹೀಗೆ ಹತ್ತು ಹಲವು ಕಮೆಂಟ್ ಗಳನ್ನು ಹಾಕುವ ಮೂಲಕ ಜನ ಬಿಎಮ್ಆರ್ಸಿಎಲ್ ಬಗ್ಗೆ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
#BMRCL welcomes Sunita Williams and Butch Wilmore back to Earth! Your achievements continue to make us proud. pic.twitter.com/DOcAa8Nrns
— ನಮ್ಮ ಮೆಟ್ರೋ (@OfficialBMRCL) March 19, 2025