BMTC ಬಸ್ ಚಾಲಕರೇ ಎಚ್ಚರ: ಇನ್ಮುಂದೆ ಅಪಘಾತ ಮಾಡಿದ್ರೆ ಸಸ್ಪೆಂಡ್, ಕೆಲಸದಿಂದ ವಜಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್ ಚಾಲಕರಿಂದ ಒಂದರ ಮೇಲೊಂದು ಅಪಘಾತವಾಗುತ್ತಿದ್ದು, ಈ ಹಿನ್ನೆಲೆ ಅಪಘಾತ ತಡೆಗೆ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಇಂದಿನಿಂದಲೇ ಜಾರಿಗೆ ಬರುವಂತೆ ಅಪಘಾತ ಎಸಗಿದ್ರೆ ಮೊದಲ ಸಲಕ್ಕೆ ಸಸ್ಪೆಂಡ್, ಎರಡನೇ ಸಲಕ್ಕೆ ಕೆಲಸದಿಂದಲೇ ವಜಾಗೊಳಿಸುವಂತ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ.

ಈ ಕುರಿತಂತೆ ಬಿಎಂಟಿಸಿ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ ರೆಡ್ಡಿ ಮಾಹಿತಿ ಹಂಚಿಕೊಂಡಿದ್ದು, ಬಿಎಂಟಿಸಿ ಚಾಲಕರು ಅಪಘಾತ ತಡೆಗಾಗಿ ಹೊಸ ನಿಯಮ ಜಾರಿಗೊಳಿಸಲಾಗುತ್ತಿದೆ. ಚಾಲಕರು ಎರಡು ಬಾರಿ ಅಪಘಾತ ಎಸಗಿದ್ರೆ ಅವರನ್ನು ಕೆಲಸದಿಂದಲೇ ವಜಾಗೊಳಿಸುವುದಾಗಿ ತಿಳಿಸಿದರು.

ಮೊದಲ ಸಲ ಅಪಘಾತವೆಸಗಿದ್ರೆ 6 ತಿಂಗಳು ಸಸ್ಪೆಂಡ್ ಮಾಡಲಾಗುತ್ತದೆ. ಸಸ್ಪೆಂಡ್ ಅವಧಿ ಮುಗಿದ ಮೇಲೆ ತರಬೇತಿ ನೀಡಿ ಡ್ಯೂಟಿ ನೀಡಲಾಗುತ್ತದೆ. ಎರಡು ಸಲ ಅಪಘಾತವನ್ನು ಮಾಡಿದ್ರೆ ಕೆಲಸದಿಂದಲೇ ವಜಾಗೊಳಿಸುವುದಾಗಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!