ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಜನತೆಗೆ ಬಿಎಂಟಿಸಿ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಇಷ್ಟು ದಿನ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಬಿಎಂಟಿಸಿ ಬಸ್ಗಳಲ್ಲಿ ಸಂಚಾರ ಮಾಡುವ ಪ್ರಯಾಣಿಕರು, ಹಣ ಕೊಟ್ಟು ಟಿಕೆಟ್ ತೆಗೆದುಕೊಂಡು ಪ್ರಯಾಣ ಮಾಡ್ತಿದ್ರು, ಅದರ ಜೊತೆಗೆ ಟೋಲ್ ದರವನ್ನೂ ಪಾವತಿ ಮಾಡ್ತಿದ್ರು. ಇದಕ್ಕೆ ರಿಲೀಫ್ ಕೊಟ್ಟಿರೋ ಬಿಎಂಟಿಸಿ, ನೈಸ್ ರಸ್ತೆಯಲ್ಲಿ ಸಂಚಾರ ಮಾಡೋರಿಗೆ ತಿಂಗಳ ಪಾಸ್ನ ಭಾಗ್ಯ ಕಲ್ಪಿಸಿದೆ.
ಮಾದಾವರ ಟು ಎಲೆಕ್ಟ್ರಾನಿಕ್ ಸಿಟಿಗೆ ನೈಸ್ ರಸ್ತೆಯಲ್ಲಿ ಸಂಚಾರ ಮಾಡುವ ವಜ್ರ ಬಸ್ಗಳಲ್ಲಿ ಇನ್ಮುಂದೆ ಡೈಲಿ ಟಿಕೆಟ್ ಜೊತೆ ಜೊತೆಗೆ, ಮಾಸಿಕ ಪಾಸ್ ಸೌಲಭ್ಯ ನೀಡೋಕೆ ಬಿಎಂಟಿಸಿ ಮುಂದಾಗಿದೆ.. ವಜ್ರ ಬಸ್ ಹಾಗೂ ನೂತನ ಎಸಿ ವಜ್ರ ಬಸ್ಗಳಲ್ಲಿ ನಾಗರಿಕರು ತಿಂಗಳ ಪಾಸ್ ಪಡೆಯಬಹುದಾಗಿದೆ.. ನಾಳೆಯಿಂದಲೇ ನೈಸ್ ರಸ್ತೆಯಲ್ಲಿ ನೂತನ ಎಸಿ ವಜ್ರ ಬಸ್ಗಳು ಸಂಚಾರ ಮಾಡಲಿದ್ದು, ನಾಳೆಯಿಂದಲೇ ತಿಂಗಳ ಪಾಸ್ನ ಪ್ರಯೋಜನವನ್ನು ಪ್ರಯಾಣಿಕರು ಪಡೆಯಬಹುದಾಗಿದೆ.
ವಜ್ರ ಬಸ್ಗಳಲ್ಲಿ ತಿಂಗಳ ಪಾಸ್ಗೆ 1 ಸಾವಿರದ 904 ರೂಪಾಯಿ ದರ ನಿಗದಿ ಮಾಡಲಾಗಿದೆ. ಪಾಸ್ ಜೊತೆ ಜೊತೆಗೆ ಟೋಲ್ ಶುಲ್ಕ 1 ಸಾವಿರದ 333 ರೂಪಾಯಿ ಹಾಗೂ ಜಿಎಸ್ಟಿ 161 ರೂಪಾಯಿ ಸೇರಿ ಒಟ್ಟು 3 ಸಾವಿರದ 400 ರೂಪಾಯಿಗೆ ವಜ್ರ ಬಸ್ಗಳಲ್ಲಿ ಮಾಸಿಕ ಪಾಸ್ ಪ್ರಯಾಣಿಕರು ಪಡೆಯಬಹುದಾಗಿದೆ.
ಮೆಟ್ರೋಗಿಂತ ವೇಗವಾಗಿ ಮಾದಾವರದಿಂದ ಎಲೆಕ್ಟ್ರಾನಿಕ್ ಸಿಟಿ ತಲುಪುತ್ತಿರುವ ನೈಸ್ ರಸ್ತೆಯ ಬಸ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಮಾದಾವರ ಟು ಎಲೆಕ್ಟ್ರಾನಿಕ್ ಸಿಟಿ ತಲುಪಲು ಮೆಟ್ರೋದಲ್ಲಿ ಸುಮಾರು 1 ಗಂಟೆ 30 ನಿಮಿಷ ಪ್ರಯಾಣ ಮಾಡಬೇಕು. ಆದ್ರೆ, ನೈಸ್ ರಸ್ತೆಯ ಎಸಿ ಬಸ್ ಸಂಚಾರದಿಂದ ಈ ಪ್ರಯಾಣದಲ್ಲಿ 20 ನಿಮಿಷ ಕಡಿತ ಆಗಲಿದೆ.. ಕೇವಲ 1 ಗಂಟೆ 10 ನಿಮಿಷದಲ್ಲಿ ಮಾದಾವರದಿಂದ ಎಲೆಕ್ಟ್ರಾನಿಕ್ ಸಿಟಿ ತಲುಪಬಹುದಾಗಿದ್ದು, ತಿಂಗಳ ಪಾಸ್ನಿಂದ ಜನರಿಗೆ ಇನ್ನಷ್ಟು ಅನುಕೂಲ ಆಗಲಿದೆ.

