ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಕಲಚೇತನರಿಗೆ ಸಾರಿಗೆ ಇಲಾಖೆ ಗುಡ್‌ನ್ಯೂಸ್ ನೀಡಿದ್ದು, ವಿಕಲಚೇತನರಿಗೆ ರಿಯಾಯಿತಿ ದರದಲ್ಲಿ ಪಾಸ್ ವಿತರಣೆ ಮಾಡಲಾಗುತ್ತಿದೆ.
2024ರ ಅವಧಿಗೆ ರಿಯಾಯಿತಿ ದರದಲ್ಲಿ ಪಾಸ್ ವಿತರಣೆ ಮಾಡಲಾಗುತ್ತಿದ್ದು, ವರ್ಷದ ಪಾಸ್ ಮೊತ್ತ 660 ರೂಪಾಯಿ ಇರಲಿದೆ.
ಇಂದಿನಿಂದ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ನೂತನ ಪಾಸ್ ಅರ್ಜಿ ಸಲ್ಲಿಸಲು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಇನ್ನುಳಿದಂತೆ ಕೆಳಕಂಡ ಕಡೆ ಪಾಸ್ ನವೀಕರಣಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ..
- ಕೆ.ಆರ್ ಮಾರ್ಕೆಟ್ ಟಿಟಿಎಂಸಿ
- ಬನಶಂಕರಿ ಟಿಟಿಎಂಸಿ
- ಶಿವಾಜಿನಗರ ಟಿಟಿಎಂಸಿ
- ಹೊಸಕೋಟೆ ಟಿಟಿಎಂಸಿ
- ಕೆಂಗೇರಿ ಟಿಟಿಎಂಸಿ
- ಶಾಂತಿನಗರ ಟಿಟಿಎಂಸಿ
- ವೈಟ್ ಫೀಲ್ಡ್ ಟಿಟಿಎಂಸಿ
- ಜಯನಗರ ಟಿಟಿಎಂಸಿ
- ದೊಮ್ಮಲೂರು ಟಿಟಿಎಂಸಿ
- ಯಶವಂತಪುರ ಟಿಟಿಎಂಸಿ
- ವಿಜಯನಗರ ಟಿಟಿಎಂಸಿ