ಕಾಂಗೋದಲ್ಲಿ ಬೋಟ್ ಮುಳುಗಡೆ.. 78 ಮಂದಿ ಜಲಸಮಾಧಿ, ಭಯಾನಕ ದೃಶ್ಯ ಸೆರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗೋದಲ್ಲಿ ಬೋಟ್ ಮುಳುಗಿ 78 ಮಂದಿ ಜಲಸಮಾಧಿಯಾಗಿದ್ದಾರೆ. ಘಟನೆಯ ಶಾಕಿಂಗ್ ವಿಡಿಯೋ ಇದೀಗ ವೈರಲ್ ಆಗಿದೆ.

ದಕ್ಷಿಣ ಕಿವು ಪ್ರಾಂತ್ಯದ ಮಿನೋವಾ ಪಟ್ಟಣದಿಂದ ಗೋಮಾ ನಗರಕ್ಕೆ 278 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಗೋಮಾ ಕರಾವಳಿಯಿಂದ ಕೇವಲ 100 ಮೀಟರ್ ದೂರದಲ್ಲಿ ಓವರ್‌ಲೋಡ್‌ನಿಂದ ಮಗುಚಿ ಬಿದ್ದಿದೆ. ಈ ಘಟನೆ ಕಿವು ಸರೋವರದಲ್ಲಿ ನಡೆದಿದೆ. ಈ ಘಟನೆಯಲ್ಲಿ 78 ಮಂದಿ ಸಾವನ್ನಪ್ಪಿದ್ದು, ಉಳಿದ 200 ಮಂದಿಯನ್ನು ರಕ್ಷಣಾ ತಂಡಗಳು ರಕ್ಷಿಸಿವೆ.

ಈ ಘಟನೆಯಲ್ಲಿ ಕನಿಷ್ಠ 78 ಜನರು ಸಾವನ್ನಪ್ಪಿದ್ದಾರೆ. ಕೆಲವು ಬದುಕುಳಿದವರು ದಡಕ್ಕೆ ಈಜಿದರು ಮತ್ತು ಇತರರನ್ನು ಭದ್ರತಾ ಪಡೆಗಳು ರಕ್ಷಿಸಿದವು ಎಂದು ದಕ್ಷಿಣ ಕಿವು ಗವರ್ನರ್ ಜೀನ್-ಜಾಕ್ವೆಸ್ ಸುದ್ದಿಗಾರರಿಗೆ ತಿಳಿಸಿದರು.

ನಿಖರವಾದ ಸಾವಿನ ಸಂಖ್ಯೆ ದೃಢೀಕರಿಸಲು ಇನ್ನೂ ಎರಡು ದಿನಗಳು ಬೇಕಾಗುತ್ತವೆ. ರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ, ಆದರೆ ಎಲ್ಲಾ 78 ಮಂದಿಯ ಶವಗಳು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!