ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ಗೇಟ್ ವೇ ಆಫ್ ಇಂಡಿಯಾ ಬಳಿ 110 ಪ್ರಯಾಣಿಕರಿದ್ದ ಬೋಟ್ ಸಮುದ್ರದಲ್ಲಿ ಮುಳುಗಡೆಯಾಗಿದೆ. ಕೂಡಲೇ ಮುಂಬೈ ಪೊಲೀಸರು, ನೌಕಾದಳದ ಸಿಬ್ಬಂದಿ ರಕ್ಷಿಸಲು ಹರಸಾಹಸ ಪಟ್ಟಿದ್ದು, ಆದರೆ 13 ಮಂದಿ ಸಾವನ್ನಪ್ಪಿದ್ದಾರೆ.
ಗೇಟ್ ವೇ ಬಳಿ ಪ್ರವಾಸಿಗರಿದ್ದ ಬೋಟ್ಗೆ ನೌಕಾಪಡೆಯ ಸ್ಪೀಡ್ ಬೋಟ್ ಡಿಕ್ಕಿಯಾಗಿದೆ. ಬೋಟ್‌ನಲ್ಲಿರುವ ಪ್ರಯಾಣಿಕರ ರಕ್ಷಣೆಗೆ ನೌಕಾದಳ, ಪೊಲೀಸರು ಕಾರ್ಯಾಚರಣೆ ನಡೆಸಿದರು. ಇದುವರೆಗೂ 101 ಜನರನ್ನು ನೌಕಾಪಡೆ ಸಿಬ್ಬಂದಿ ರಕ್ಷಿಸಿದ್ದು, ದುರಂತದಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ನಾಲ್ವರ ಸ್ಥಿತಿ ಇನ್ನೂ ಗಂಭೀರವಾಗಿದೆ.
ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ಈ ಘೋರ ದುರಂತದ ಕ್ಷಣಕ್ಷಣದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಸಮುದ್ರದಲ್ಲಿ ಪ್ರಯಾಣಿಕರಿದ್ದ ಬೋಟ್ ಮುಳುಗಡೆ ಆಗಿದೆ. ಪ್ರವಾಸಿಗರಿದ್ದ ಬೋಟ್ ದುರಂತದಲ್ಲಿ ನೌಕಾಪಡೆಯ ಮೂವರು ಸಿಬ್ಬಂದಿ ಸಹ ಸಾವನ್ನಪ್ಪಿದ್ದಾರೆ.
ಈ ಬೋಟ್‌ನಲ್ಲಿ ಮುಂಬೈ ಬಳಿಯ ಎಲಿಫೆಂಟಾ ಗುಹೆಗಳನ್ನು ನೋಡಲು ಪ್ರವಾಸಿಗರನ್ನು ಕರೆದುಕೊಂಡು ಹೋಗಲಾಗಿತ್ತು. ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬೋಟ್ಗೆ ನೌಕಾಪಡೆಯ ಸ್ಪೀಡ್ ಬೋಟ್ ಡಿಕ್ಕಿಯಾಗಿದೆ ಎನ್ನಲಾಗಿದೆ. ಘಟನೆ ವೇಳೆ ಬೋಟ್‌ನಲ್ಲಿ 110 ಜನ ಪ್ರಯಾಣಿಕರಿದ್ದರು ಎಂದು ಮಹಾರಾಷ್ಟ್ರ ವಿಧಾನಸಭೆಗೆ ಸಿಎಂ ದೇವೇಂದ್ರ ಫಡ್ನವಿಸ್ ಮಾಹಿತಿ ನೀಡಿದ್ದಾರೆ.