ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಂಗಾ ನದಿಯ ದಡದಲ್ಲಿ ಛತ್ ಘಾಟ್ ನ ತಪಾಸಣೆ ವೇಳೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ದೋಣಿ ಸೇತು ಪಿಲ್ಲರ್ ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಸಿಎಂ ಸಹಿತ ದೋಣಿಯಲ್ಲಿದ್ದವರೆಲ್ಲರೂ ಸುರಕ್ಷಿತವಾಗಿದ್ದಾರೆ.
ಭಾರಿ ಗಾಳಿಗೆ ದೋಣಿ ಸಮತೋಲನ ಕಳೆದುಕೊಂಡು ಸೇತುವೆಗೆ ಡಿಕ್ಕಿ ಹೊಡೆದಿದೆ. ನಿತೀಶ್ ಕುಮಾರ್ ಹಾಗೂ ಸಚಿವ ಸಂಜಯ್ ಸೇರಿದಂತೆ ಹಲವರು ಅಪಾಯದಿಂದ ಪಾರಾಗಿದ್ದಾರೆ.
ಪಾಟ್ನಾ ಡಿಎಂ ಡಾ. ಚಂದ್ರಶೇಖರ್ ಸಿಂಗ್ ನೀಡಿದ ಮಾಹಿತಿಯಂತೆ, ಕೆಲವು ತಾಂತ್ರಿಕ ದೋಷದಿಂದಾಗಿ ದೋಣಿ ಜೆಪಿ ಸೇತು ಪಿಲ್ಲರ್‌ಗೆ ಡಿಕ್ಕಿ ಹೊಡೆದಿದೆ. ನಂತರ, ಬಿಹಾರ ಸಿಎಂ ಮತ್ತು ಇತರರನ್ನು ಸುರಕ್ಷಿತವಾಗಿ ಮತ್ತೊಂದು ಸ್ಟೀಮ್ ಬೋಟ್‌ಗೆ ಸ್ಥಳಾಂತರಿಸಲಾಗಿದೆ.