ಕವಳಗಿ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ ಮತ್ತೋರ್ವ ಯುವಕನ ಶವ ಪತ್ತೆ

ಹೊಸದಿಗಂತ ಯಲ್ಲಾಪುರ:

ಕವಳಗಿ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ ಮತ್ತೊಬ್ಬನ ಶವ ಪತ್ತೆಯಾಗಿದೆ. ಘಟನೆ ನಡೆದ ಕವಲಗಿ ಹಳ್ಳದಲ್ಲಿ 1 ಕೀ.ಮಿ ದೂರದಲ್ಲಿ ಮಹಮ್ಮದ್ ಹನೀಪ್ ಇಬ್ರಾಹಿಂ ಸಾಬ್ ಸೈಯದ್ ಈತನ ಮೃತ ದೇಹ ಪತ್ತೆಯಾಗಿದೆ.

ಮಾದನಸರದ ಸಹೋದರರು ಬೇಡ್ತಿ ನದಿಗೆ ಮೀನು ಹಿಡಿಯಲು ಹೋಗಿ ಹಿಂದಿರುಗುವ ಸಂದರ್ಭದಲ್ಲಿ ಕವಳಗಿ ಹಳ್ಳದಲ್ಲಿ ಮುಳುಗಿ ಕಾಣೆಯಾಗಿದ್ದವರಲ್ಲಿ ಓರ್ವನ ಶವ ಸೋಮವಾರ ಅ 11ರಂದು ಪತ್ತೆಯಾಗಿತ್ತು. ಆರಂಭಿಸಿದ್ದರು.ತೀವ್ರ ಶೋಧದ ನಂತರಇಂದು ಇನ್ನೊರ್ವ ಮಹಮ್ಮದ್ ಸೈಯದ್ ಶವ ಪತ್ತೆಯಾಗಿದೆ ಎಂದು ಡಿವಾಯಸ್ಪಿ ಗೀತಾ ಪಾಟೀಲ ತಿಳಿಸಿದ್ದಾರೆ.

ಬೇಡ್ತಿ ನದಿಗೆ ಮೀನು ಹಿಡಿಯಲು ಹೋಗಿ ಹಿಂದಿರುಗುವ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದ ಸಹೋದರರಿಬ್ಬರಲ್ಲಿ ಓರ್ವನ ಶವ ಅ 11 ರಂದು ಪತ್ತೆಯಾಗಿತ್ತು.ಇನ್ನೊರ್ವ ನ ಶವ ಅ 13 ರಂದು ಪತ್ತೆಯಾಗಿದೆ.

ತಾಲೂಕಿನ ಶಿರನಾಲ ಮಾದನಸರದ ಮಹ್ಮದ್ ರಫೀಕ್ ಸಾಬ್ ಸೈಯದ್ (27) ಮತ್ತು ಮಹ್ಮದ್ ಹನೀಫ್ ಸಾಬ್ ಸೈಯದ್ (25) ಕಾಣೆಯಾದವರಾಗಿದ್ದು, ರವಿವಾರ ಬೆಳಗ್ಗೆ ಕವಲಗಿ ಹಳ್ಳ ದಾಟಿ ಬೇಡ್ತಿ ನದಿಗೆ ಮೀನು ಹಿಡಿಯಲು ತೆರಳಿದ್ದರು. ಸಂಜೆ ಮೀನು ಹಿಡಿದು ವಾಪಸು ಬರುತ್ತಿರುವಾಗ ಕವಲಗಿ ಹಳ್ಳದಲ್ಲಿ ಒಮ್ಮೆಲೆ ನೀರು ಹೆಚ್ಚಾದರಿಂದ ಹಳ್ಳದ ಮಧ್ಯದಲ್ಲಿದ್ದ ಇಬ್ಬರೂ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿರುವ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಅ 10ರಂದು ಪ್ರಕರಣ ದಾಖಲಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!