ಹೊಸದಿಗಂತ ವರದಿ ಯಲ್ಲಾಪುರ :
ರಾಷ್ಟ್ರೀಯ ಹೆದ್ದಾರಿಗೆ ಬಳಿ ಬಣ್ಣದ ಪಟ್ಟಿ ಬಳಿಯುವ ವೇಳೆ ಬಾಯ್ಲರ್ ಸ್ಫೋಟವಾದ ಘಟನೆ ತಾಲೂಕಿನ ಆರ್ತಿಬೈಲ್ ಘಟ್ಟದಲ್ಲಿ ಶುಕ್ರವಾರ ನಡೆದಿದೆ.
ಹೆದ್ದಾರಿಯಲ್ಲಿನ ಹೊಂಡ ಮುಚ್ಚುವ ದುರಸ್ಥಿ ಕೆಲಸ ನಡೆದಿದೆ. ಪ್ಯಾಚ್‌ವರ್ಕ ಕೆಲಸ ಮುಕ್ತಾಯದ ನಂತರ ಹೆದ್ದಾರಿಯ ಉದ್ದಕ್ಕೂ ಬಿಳಿ ಬಣ್ಣದ ಪಟ್ಟಿಗಳನ್ನು ಎಳೆಯಲಾಗುತ್ತಿದೆ.ಈ ಬಣ್ಣ ಬಳಿಯುವದಕ್ಕೆ ಗದಗದ ಕಂಪನಿಗೆ ಗುತ್ತಿಗೆ ನೀಡಲಾಗಿದೆ.
ಕಂಪನಿಯ ಸಿಬ್ಬಂದಿ ಗ್ಯಾಸ್ ಸಿಲೆಂಡರ್ ಹಾಗೂ ಬಾಯ್ಲರ್ ಬಳಕೆ ಮಾಡಿ ರಸ್ತೆಗೆ ಬಿಳಿ ಬಣ್ಣದ ಪಟ್ಟಿ ಬಳಿಯುತ್ತಿರುವ ಸಂದರ್ಭದಲ್ಲಿ ಸಣ್ಣ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗಿದ್ದು ಸಿಲೆಂಡರ್ ಸ್ಫೋಟಿಸಿದೆ. ಅದೇ ವೇಳೆ ಬಾಯ್ಲರ್ ಬಳಿ ಬೆಂಕಿ ತಾಗಿದ್ದು, ಬಿಸಿಯ ತೀವ್ರತೆಗೆ ಬಾಯರ್ ಸ್ಪೋಟವಾಗಿದೆ.
ಲಾರಿಯೊಂದರಲ್ಲಿ ಬಾಯ್ಲರ್ ಇಡಲಾಗಿತ್ತು. ಸ್ಪೋಟದಿಂದ ಬಾಯ್ದರ್ ಜೊತೆ ಲಾರಿಗೂ ಅಲ್ಲಲ್ಲಿ ಹಾನಿಯಾಗಿದೆ. ಅಲ್ಲಿದ್ದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಣ್ಣದ ಪಟ್ಟಿ ಬಳಿಯುವ ವೇಳೆ ಬಾಯ್ಲರ್ ಬ್ಲಾಸ್ಟ್, ಸಿಬ್ಬಂದಿ ಪ್ರಾಣಾಪಾಯದಿಂದ ಪಾರು

