ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಷ್ಮೆ ನೂಲು ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ರಾಮನಗರದ ಟಿಪ್ಪು ಬಡಾವಣೆಯ ಕಾರ್ಖಾನೆಯೊಂದರಲ್ಲಿ ನಡೆದಿದೆ.
ಸನಾವುಲ್ಲಾ ಖಾನ್ (63) ಮೃತಪಟ್ಟವರು. ಬಾಯ್ಲರ್ ಗೆ ಸೌದೆ ಲೋಡ್ ಮಾಡುವಾಗ ಏಕಾಏಕಿ ಸ್ಫೋಟ ಸಂಭವಿಸಿ ಅನಾಹುತ ಸಂಭವಿಸಿದೆ. ಸ್ಥಾವರದಲ್ಲಿ 10ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಅದೃಷ್ಟವಶಾತ್, ಉಳಿದ ಕಾರ್ಮಿಕರು ಗೈರುಹಾಜರಾಗಿದ್ದು, ಯಾವುದೇ ಗಾಯಗಳಾಗಿಲ್ಲ. ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಕ್ರಂ ಪಾಷಾ ಎಂಬುವವರು ಈ ಕಾರ್ಖಾನೆ ಹೊಂದಿದ್ದು, ಈತನ ವಿರುದ್ಧ ರಾಮನಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.