ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಬೋಲ್ಡ್ ನಟಿ ಚೈತ್ರಾ ಆಚಾರ್ ಕಾಲಿವುಡ್‌ಗೆಹಾರಿದ್ದಾರೆ. ತಮಿಳಿನಲ್ಲಿ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ನಟ ಸಿದ್ಧಾರ್ಥ್‌ಗೆ ನಾಯಕಿಯಾಗಿ ಚೈತ್ರಾ ನಟಿಸುತ್ತಿದ್ದಾರೆ
ಪ್ರತಿಭಾನ್ವಿತ ನಟಿ ಚೈತ್ರಾಗೆ ತಮಿಳಿನಿಂದ ಉತ್ತಮ ಅವಕಾಶಗಳು ಅರಸಿ ಬರುತ್ತಿವೆ. ಈಗಾಗಲೇ ಶಶಿಕುಮಾರ್‌ಗೆ ನಾಯಕಿಯಾಗಿ ರಾಜು ಮುರುಗನ್ ನಿರ್ದೇಶನದಲ್ಲಿ ಚೈತ್ರಾ ನಟಿಸುತ್ತಿದ್ದಾರೆ. ಈ ಬೆನ್ನಲ್ಲೇ ಟೋಬಿ ಬೆಡಗಿಗೆ ಬಂಪರ್ ಚಾನ್ಸ್ ಸಿಕ್ಕಿದೆ.
ಶಾಂತಿ ಟಾಕೀಸ್ ನಿರ್ಮಾಣದ, ಶ್ರೀ ಗಣೇಶ್ ನಿರ್ದೇಶದ ಹೊಸ ಸಿನಿಮಾದಲ್ಲಿ ಸಿದ್ಧಾರ್ಥ್‌ಗೆ ಚೈತ್ರಾ ಹೀರೋಯಿನ್ ಆಗಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕನ್ನಡದ ನಟಿ ಕಾಣಿಸಿಕೊಳ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಕೂಡ ಶುರುವಾಗಲಿದೆ.