August 24, 2026
Monday, August 24, 2026
spot_img

ತೆರೆ ಮೇಲಷ್ಟೇ ಯಶ್‌ ಅಬ್ಬರ, ನಿಜ ಜೀವನದಲ್ಲಿ ವಿನಮ್ರ ವ್ಯಕ್ತಿ ಎಂದ ಬಾಲಿವುಡ್‌ ನಟ ಅನುಪಮ್‌ ಖೇರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ರಾಕಿಂಗ್‌ ಸ್ಟಾರ್‌ ಯಶ್‌ ಅವರನ್ನು ಭೇಟಿ ಮಾಡಿ ತುಂಬಾ ಖುಷಿಯಾಯ್ತು ಎಂದು ಅನುಪಮ್‌ ಖೇರ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸದ್ಯ ಟಾಕ್ಸಿಕ್‌ ಸಿನಿಮಾ ಫೈನಲ್‌ ಪ್ರಮೋಷನ್ಸ್‌ನಲ್ಲಿ ರಾಖಿಭಾಯ್‌ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್‌ವುಡ್‌ನಿಂದ ದೂರದ ಬಾಲಿವುಡ್‌ಗೆ ಪ್ರಯಾಣ ಬೆಳೆಸಿರುವ ಯಶ್‌ಗೆ ಬಾಲಿವುಡ್‌ ದಿಗ್ಗಜರಿಂದ ಹೃದಯಪೂರ್ವಕ ಸ್ವಾಗತ ಸಿಕ್ಕಿದೆ. ಯಶ್‌ ಹಾಗೂ ನಟ ಅನುಪಮ್‌ ಖೇರ್‌ ಭೇಟಿಯಾಗಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಪೋಸ್ಟ್‌ನಲ್ಲೇನಿದೆ?

ಖುಷಿಯ ಚಿಲುಮೆಯಂತಿರುವಯಶ್‌ನನ್ನು ಭೇಟಿಯಾಗಿ ಸಿಕ್ಕಾಪಟ್ಟೆ ಸಂತಸವಾಯ್ತು. ಕೆಜಿಎಫ್‌ನಲ್ಲಿ ಅದ್ಧೂರಿ ಪ್ರದರ್ಶನ ನೀಡಿ ತಮ್ಮದೇ ದಾರಿ ಮಾಡಿಕೊಂಡಿರುವ ಯಶ್‌ ಭಾರತೀಯ ಸಿನಿಮಾಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ.

ಸಿನಿಮಾಗಳಲ್ಲಿ ಅಬ್ಬರಿಸುವ ಯಶ್‌ ಇಷ್ಟೊಂದು ಸಿಂಪಲ್‌, ವಿನಮ್ರ ವ್ಯಕ್ತಿ ಅನ್ನೋದು ಮೀಟ್‌ ಮಾಡಿದವರಿಗೆ ಮಾತ್ರ ಗೊತ್ತಾದೀತು. ಎಷ್ಟೇ ಮೇಲಕ್ಕೆ ಹೋದರೂ ಬೇರನ್ನು ಮರೆಯದ ವ್ಯಕ್ತಿ. ಸಿನಿಮಾ, ಜೀವನ, ಕುಟುಂಬ, ಕನಸು ಹಾಗೂ ಜೀವನದ ಪ್ರಯಾಣದ ಬಗ್ಗೆ ಮಾತನಾಡಿದೆವು. ಯಾವಾಗ ಯಂಗಸ್ಟರ್ಸ್‌ಗಳನ್ನು ಭೇಟಿಯಾಗುತ್ತೀನೋ ಆಗೆಲ್ಲಾ ನನ್ನಲ್ಲಿ ಬೇರೇನೋ ಎನರ್ಜಿ ಹರಿಯುತ್ತದೆ. ಇನ್ನಷ್ಟು ಸಾಧನೆ ಮಾಡಬೇಕು, ಕೆಲಸ ಮಾಡಬೇಕು ಎನ್ನುವ ಆಸಕ್ತಿ ಬರುತ್ತದೆ. ಇದು ನಮ್ಮ ಭಾರತೀಯ ಸಿನಿಮಾ ಹಾಗೂ ನಮ್ಮ ಕಲಾವಿದರ ಚಮತ್ಕಾರ. ಯಶ್‌ ನಿಮ್ಮ ʼಟಾಕ್ಸಿಕ್‌ʼ ವಿಶ್ವದಾದ್ಯಂತ ಹರಡಲಿ. ಆಲ್‌ದಿಬೆಸ್ಟ್‌. ಜನರ ಮನಸ್ಸಿನಲ್ಲಿ ಹೀಗೆಯೇ ರಾರಾಜಿಸುತ್ತಾ ಇರಿ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !