ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ. ಅವರು ಯಾವಾಗಲೂ ಟೋಪಿಯನ್ನು ಇಷ್ಟಪಡುತ್ತಾರೆ ಎಂದು ತೋರುತ್ತದೆ. ಆದರೆ ನಾನು ಅವರನ್ನು ಮುಸ್ಲಿಮರು ಹಾಕುವ ಟೋಪಿಯಲ್ಲಿ ನೋಡಲು ಇಷ್ಟಪಡುವುದಾಗಿ ನಟ (actor) ನಾಸಿರುದ್ದೀನ್ ಶಾ ಹೇಳಿದ್ದಾರೆ.
ಸಂವಾದವೊಂದರಲ್ಲಿ ಮಾತನಾಡಿದ ಅವರು, ಭಾರತೀಯ ಮುಸ್ಲಿಮರಿಗೆ ತೋರಿಸುವ ಸಲುವಾಗಿ ನಾನು ಪ್ರಧಾನಿ ಮೋದಿಯನ್ನು ಟೋಪಿಯಲ್ಲಿ ನೋಡಲು ಇಷ್ಟಪಡುವುದಾಗಿ ಹೇಳಿಕೊಂಡಿದ್ದಾರೆ.
ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಮೋದಿ 3.0 ಕ್ಯಾಬಿನೆಟ್‌ನಲ್ಲಿ ಮುಸ್ಲಿಂ ಪ್ರಾತಿನಿಧ್ಯವಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶಾ, ಇದು ಖಿನ್ನತೆಯನ್ನುಂಟು ಮಾಡುತ್ತದೆ. ಆದರೆ ಆಶ್ಚರ್ಯವೇನಿಲ್ಲ. ಮುಸ್ಲಿಮರ ಮೇಲಿನ ದ್ವೇಷವನ್ನು ಇದು ತೋರುತ್ತದೆ ಎಂದರು.
ಮೋದಿ ಅವರು ಒಂದು ದಿನ ಮುಸ್ಲಿಮರು ಧರಿಸುವ ಟೋಪಿಯಲ್ಲಿ ನೋಡಲು ನಾನು ಬಯಸುತ್ತೇನೆ. ಮುಸ್ಲಿಮರು ಧರಿಸುವ ಟೋಪಿ ಧರಿಸುವುದು ಒಂದು ಸೌಹಾರ್ದದ ಸೂಚಕವಾಗಿದೆ. ಒಂದು ಸಮಾರಂಭದಲ್ಲಿ ಅವರು ಮೌಲ್ವಿಯವರು ನೀಡಿದ ಈ ಟೋಪಿಯನ್ನು ಧರಿಸಲು ನಿರಾಕರಿಸಿದ್ದನ್ನು ಸ್ಮರಣೆಯಿಂದ ಅಳಿಸಿ ಹಾಕುವುದು ಕಷ್ಟ. ನಾನು ನಿಮ್ಮಿಂದ ಪ್ರತ್ಯೇಕವಾಗಿಲ್ಲ ಎಂದು ಅವರು ಮನವರಿಕೆ ಮಾಡಿದರೆ ಈ ದೇಶದ ಮುಸ್ಲಿಮರಿಗೆ ಇದು ಒಂದು ದೊಡ್ಡ ಸಹಾಯ ಎಂದು ನಾನು ಭಾವಿಸುತ್ತೇನೆ ಎಂದು ನಾಸಿರುದ್ದೀನ್ ಶಾ ಹೇಳಿದರು.