ಹೊಸ ದಿಗಂತ ಡಿಜಿಟಿಲ್ ಡೆಸ್ಕ್:
ಬಾಲಿವುಡ್‌ನ ಬಿಗ್ ಸ್ಟಾರ್ ಸಲ್ಮಾನ್ ಖಾನ್ ಬಾಂದ್ರಾ ಪಶ್ಚಿಮದಲ್ಲಿರುವ ಶಿವ ಆಸ್ಥಾನ್ ಹೈಟ್ಸ್ ಡೆವಲಪ್‌ಮೆಂಟ್‌ನಲ್ಲಿದ್ದ ತಮ್ಮ ಜನಪ್ರಿಯ ಅಪಾರ್ಟ್‌ಮೆಂಟ್‌ಅನ್ನು 5.35 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ.
1,318 ಚದರ ಅಡಿ ಗಾತ್ರದ ಫ್ಲಾಟ್ ಅನ್ನು ನೋಯ್ಡಾ ಮೂಲದ ಇಬ್ಬರು ಖರೀದಿದಾರರು ಖರೀದಿಸಿದ್ದಾರೆ ಎಂದು ಸ್ಕ್ವೇರ್ ಯಾರ್ಡ್ಸ್ ಪಡೆದುಕೊಂಡಿರುವ ಆಸ್ತಿ ನೋಂದಣಿ ದಾಖಲೆಗಳು ತೋರಿಸಿವೆ.
ಸಾಲು ಸಾಲು ಜೀವ ಬೆದರಿಕೆಗಳು ಬರುತ್ತಿರುವ ನಡುವೆಯೇ ಬಾಂದ್ರಾದಲ್ಲಿದ್ದ ತಮ್ಮ ಅಪಾರ್ಟ್‌ಮೆಂಟ್ ಅನ್ನು ಸಲ್ಮಾನ್ ಖಾನ್ ಮಾರಾಟ ಮಾಡಿರುವುದು ಕುತೂಹಲ ಮೂಡಿಸಿದೆ.
ಖರೀದಿದಾರರು 3.21 ಲಕ್ಷ ರೂಪಾಯಿಗಳ ಸ್ಟಾಂಪ್ ಡ್ಯೂಟಿಯನ್ನು ಪಾವತಿಸಿದ್ದಾರೆ. ಮಾರಾಟವನ್ನು ಜುಲೈ 15 ರಂದು ನೋಂದಾಯಿಸಲಾಗಿದೆ. ಸಲ್ಮಾನ್ ಖಾನ್ ಆ ಪ್ರದೇಶದ ನಿವಾಸಿಯಾಗಿದ್ದು, ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗಳಲ್ಲಿ ತಮ್ಮ ವಿಸ್ತೃತ ಕುಟುಂಬದ ಭಾಗದೊಂದಿಗೆ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಿಂದಿ ಚಲನಚಿತ್ರೋದ್ಯಮದ ಅನೇಕ ಪ್ರಮುಖ ವ್ಯಕ್ತಿಗಳು ಸಹ ಅದೇ ನೆರೆಹೊರೆಯಲ್ಲಿ ವಾಸಿಸುತ್ತಿದ್ದಾರೆ.