ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾಕುಂಭ ಮೇಳದಲ್ಲಿ ಸನ್ಯಾಸಿನಿಯಾಗಲು ಹೊರಟ ಬಾಲಿವುಡ್ ನಟಿ ಮಮತಾ ಕುಲಕರ್ಣಿ ಅವರನ್ನು ಕಿನ್ನರ ಅಖಾಡದಿಂದ ಹೊರ ಹಾಕಲಾಗಿದೆ.
ಕಿನ್ನರ ಅಖಾಡ ಸ್ಥಾಪಕ ರಿಷಿ ಅಜಯ್ ದಾಸ್ ಶುಕ್ರವಾರ ಮಮತಾ ಕುಲಕರ್ಣಿ ಅವರನ್ನು ಅಖಾಡದಿಂದಲೇ ಹೊರಹಾಕಿದ್ದಾರೆ.
ಮಮತಾ ಕುಲಕರ್ಣಿ ಅವರು ಮಹಾಮಂಡಳೇಶ್ವರ ಪಟ್ಟಕ್ಕೆ ದೀಕ್ಷೆ ತೆಗೆದುಕೊಂಡ ಮೇಲೆ ಕಿನ್ನರ ಅಖಾಡ ವಿವಾದಕ್ಕೆ ಗುರಿಯಾಗಿತ್ತು. ಇದೀಗ ಮಮತಾ ಕುಲಕರ್ಣಿ ಹಾಗೂ ಲಕ್ಷ್ಮೀ ನಾರಾಯಣ ತ್ರಿಪಾಠಿ ಇಬ್ಬರನ್ನು ಕಿನ್ನರ ಅಖಾಡ ಉಚ್ಛಾಟನೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ.
ಮಮತಾ ಕುಲಕರ್ಣಿಯನ್ನು ಮಹಾಮಂಡಳೇಶ್ವರಕ್ಕೆ ನೇಮಕ ಮಾಡಿದ್ದಕ್ಕೆ ಕಿನ್ನಾರ ಅಖಾಡದಲ್ಲಿ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು. ಇಂದು ಮಮತಾ ಕುಲಕರ್ಣಿ ಅವರನ್ನು ಮಹಾಮಂಡಳೇಶ್ವರದಿಂದ ಉಚ್ಛಾಟನೆ ಮಾಡಿರುವುದಾಗಿ ಕಿನ್ನಾರ ಅಖಾಡದ ಸಂಸ್ಥಾಪಕ ರಿಷಿ ಅಜಯ್ ದಾಸ್ ಘೋಷಣೆ ಮಾಡಿದ್ದಾರೆ.
ಕಿನ್ನರ ಅಖಾಡದ ಸಂಸ್ಥಾಪಕರ ಈ ನಿರ್ಧಾರವನ್ನು ಲಕ್ಷ್ಮೀ ನಾರಾಯಣ ತ್ರಿಪಾಠಿ ಅವರು ಖಂಡಿಸಿದ್ದಾರೆ. ಅಜಯ್ ದಾಸ್ ಅವರಿಗೆ ನಮ್ಮನ್ನು ಉಚ್ಛಾಟನೆ ಮಾಡುವ ಅಧಿಕಾರವೇ ಇಲ್ಲ ಎಂದು ಸೆಡ್ಡು ಹೊಡೆದಿದ್ದಾರೆ. ಕಿನ್ನಾರ ಅಖಾಡದಲ್ಲಿ ಮಹಾಮಂಡಳೇಶ್ವರ ದೀಕ್ಷೆ ಪಾರದರ್ಶಕವಾಗಿಯೇ ನಡೆದಿದೆ ಎಂದಿದ್ದಾರೆ.
ಕಿನ್ನರ ಅಖಾಡದಿಂದ ನಟಿ ಮಮತಾ ಕುಲಕರ್ಣಿಗೆ ರಾಜದ್ರೋಹ ಆರೋಪದಡಿ ವಜಾ ಮಾಡಲಾಗಿದೆ. ಪ್ರಯಾಗ್‌ರಾಜ್ ಮಹಾಕುಂಭಮೇಳದಲ್ಲಿ ಮಮತಾ ಕುಲಕರ್ಣಿ ಅವರು ಸನ್ಯಾಸ್ವತ್ವ ಸ್ವೀಕರಿಸಿ ಮಹಾಮಂಡಳೇಶ್ವರಿಯಾಗಿದ್ದರು.
ಮಹಾಮಂಡಲೇಶ್ವರ ಲಕ್ಷ್ಮಿ ನಾರಾಯಣ ತ್ರಿಪಾಠಿಯಿಂದ ಮಮತಾಕುಲಕರ್ಣಿ ಅವರು ದೀಕ್ಷೆ ಪಡೆದಿದ್ದರು. ಸನ್ಯಾಸತ್ವ ದೀಕ್ಷೆ ಪಡೆದ ಮಮತಾ ಕುಲಕರ್ಣಿ ತನ್ನದೇ ಪಿಂಡ ಪ್ರದಾನ ಮಾಡಿದ್ದರು. ಇದೀಗ ಕಳೆದ 20 ದಿನಗಳಿಂದ ಮಹಾಕುಂಭಮೇಳದಲ್ಲಿದ್ದ ಮಮತಾ ಕುಲಕರ್ಣಿ ಅವರನ್ನು ಮಹಾಕುಂಭಮೇಳದಿಂದಲೇ ಉಚ್ಛಾಟನೆ ಮಾಡಲಾಗಿದೆ.
ಕಿನ್ನರ ಅಖಾಡ ಸ್ಥಾಪಕರಾದ ರಿಷಿ ಅಜಯ್ ದಾಸ್ ಅವರು ಮಮತಾ ಕುಲಕರ್ಣಿ ಅವರನ್ನು ಕಿನ್ನರ ಅಖಾಡಕ್ಕೆ ಸೇರಿಸಿದ್ದಕ್ಕೆ ಮಹಾಮಂಡಲೇಶ್ವರ ಲಕ್ಷ್ಮಿನಾರಾಯಣ ತ್ರಿಪಾಠಿ ಅವರನ್ನು ವಜಾ ಮಾಡಿ ಆದೇಶ ನೀಡಿದ್ದಾರೆ.