ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ರಾಖಿ ಸಾಮಂತ್ ಮದುವೆಯಾಗಿದ್ದಾರೆ. ಮೈಸೂರು ಮೂಲದ ಬಾಯ್ ಫ್ರೆಂಡ್ ಆದಿಲ್ ಜೊತೆ ರಾಖಿ ಸಾವಂತ್ ರಿಜಿಸ್ಟರ್ ಮದುವೆಯಾಗಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದ್ದು, ಆದ್ರೆ ಈ ಬಗ್ಗೆ ರಾಖಿ ಅಥವಾ ಆದಿಲ್ ಕಡೆಯಿಂದ ಅಧಿಕೃತಗೊಂಡಿಲ್ಲ.
ರಾಖಿ ಸಾವಂತ್ ಮತ್ತು ಉದ್ಯಮಿ ಆದಿಲ್ ದುರಾನಿ ಅನೇಕ ಸಮಯದಿಂದ ಡೇಟಿಂಗ್ ಮಾಡುತ್ತಿದ್ದರು. ಇಬ್ಬರೂ ಯಾವಾಗಲು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಆದಿಲ್ ತನ್ನ ಬಾಯ್ ಫ್ರೆಂಡ್ ಎಂದು ಅನೇಕ ಬಾರಿ ಹೇಳಿದ್ದರು. ಆದರೆ ಮದುವೆಯಾದ ಬಗ್ಗೆ ಎಲ್ಲೂ ಪ್ರಸ್ತಾಪಿಸಿಲ್ಲ. ಇಬ್ಬರೂ ಜನವರಿ 11ರಂದು ನ್ಯಾಯಾಲಯದಲ್ಲಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎನ್ನಲಾಗಿದೆ. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಖಿ ಸಾವಂತ್ ಅವರಿಗೆ ಇದು ಎರಡನೇ ಮದುವೆಯಾಗಿದೆ. ಮೊದಲು ರಿತೇಶ್ ಎನ್ನುವವರ ಜೊತೆ ರಾಖಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಆದರೆ ಮದುವೆಯಾಗಿ ಕೆಲವೇ ಸಮಯಕ್ಕೆ ರಿತೇಶ್‌ರಿಂದ ದೂರ ಆಗಿ ವಿಚ್ಛೇದನ ಪಡೆದುಕೊಂಡಿದ್ದರು. ನಂತರ ಆದಿಲ್ ಜೊತೆ ಪ್ರೀತಿಯಲ್ಲಿದ್ದರು. ಇದೀಗ ಮದುವೆಯಾಗಿದ್ದಾರೆ.
ಇತ್ತ ಇಬ್ಬರ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಫೋಟೋ ಲೀಕ್ ಆದ ಬಳಿಕ ಆದಿಲ್ ಮದುವೆ ವಿಚಾರವನ್ನು ನಿರಾಕರಿಸಿದ್ದಾರೆ. ರಾಖಿ ಸಾವಂತ್ ಅವರನ್ನು ಮದುವೆಯಾಗಿಲ್ಲ ಎಂದು ಹೇಳಿದ್ದಾರೆ.
ರಾಖಿ ಸಾವಂತ್ ತಾಯಿ ಸದ್ಯ ಆಸ್ಪತ್ರೆಯಲ್ಲಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ತಾಯಿ ಜಯ್ ಸಾವಂತ್ ಅವರ ವಿಡಿಯೋವನ್ನು ರಾಖಿ ಸಾವಂತ್ ಇತ್ತೀಚಿಗಷ್ಟೆ ಶೇರ್ ಮಾಡಿದ್ದರು.