ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನಲ್ಲಿ (Bollywood) ಇದೀಗ ಮತ್ತೊಂದು ಜೀವನಾಧಾರಿತ ಸಿನಿಮಾ ಮೂಡಿ ಬರಲು ಸಜ್ಜಾಗಿದೆ. ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ (Raj Kundra) ಮ್ಮದೇ ಪ್ರಕರಣವನ್ನು ಸಿನಿಮಾ ಆಗಿಸಲು ಮುಂದಾಗಿದ್ದಾರೆ.
ಈ ಮೂಲಕ ಅಶ್ಲೀಲ ವಿಡಿಯೋ ಪ್ರಕರಣದಿಂದ ಹೋಗಿರುವ ಮಾನವನ್ನು ಸಿನಿಮಾ ಮಾಡಿ ವಾಪಸ್ ಗಳಿಸಿಕೊಳ್ಳಲು ಯತ್ನ ಮಾಡುತ್ತಿದ್ದಾರೆ.
ಅಶ್ಲೀಲ ವಿಡಿಯೋ ನಿರ್ಮಾಣ ಹಾಗೂ ಮಾರಾಟ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಕಳೆದ ವರ್ಷ ಜೂನ್ ತಿಂಗಳಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. . ತನಿಖೆ ನಡೆಸಿದ್ದ ಪೊಲೀಸರು ರಾಜ್ ಕುಂದ್ರಾ ವಿರುದ್ಧ ಸಾಕಷ್ಟು ಸಾಕ್ಷ್ಯಗಳನ್ನು ಒಟ್ಟು ಮಾಡಿದ್ದರು. ಕೆಲವು ನಟಿಯರು ಬಹಿರಂಗವಾಗಿ ಕುಂದ್ರಾ ವಿರುದ್ಧ ಆರೋಪಗಳನ್ನೂ ಮಾಡಿದರು. ಇನ್ನು ಕೆಲವರು ತನಿಖಾಧಿಕಾರಿಗಳ ಬಳಿಕ ಹೇಳಿಕೆ ನೀಡಿದ್ದರು. ಬಳಿಕ 63 ದಿನಗಳಜಾಮೀನಿನ ಮೇಲೆ ಕುಂದ್ರಾ ಜೈಲಿನಿಂದ ಹೊರಬಂದರು. ಪ್ರಕರಣ ಈಗಲೂ ವಿಚಾರಣೆ ಹಂತದಲ್ಲಿದೆ. ಇದರ ನಡುವೆ ರಾಜ್ ಕುಂದ್ರಾ ತಮ್ಮದೇ ಪ್ರಕರಣವನ್ನು ಸಿನಿಮಾ ಆಗಿಸಲು ಮುಂದಾಗಿದ್ದಾರೆ.
ತಮ್ಮ ಪಾತ್ರದಲ್ಲಿ ಸ್ವತಃ ತಾವೇ ನಟಿಸಲಿದ್ದಾರಂತೆ. ರಾಜ್ ಕುಂದ್ರಾ ನಿರ್ಮಿಸಲು ಮುಂದಾಗಿರುವ ಈ ಸಿನಿಮಾವು ಕುಂದ್ರಾರ ಪ್ರಕರಣ, ಬಂಧನ, ಜೈಲು ವಾಸ ಅದರಿಂದ ಹೊರಬಂದ ಬಳಿಕ ಏನೇನಾಯ್ತು ಎಂಬ ವಿಷಯಗಳನ್ನು ಒಳಗೊಂಡಿರುತ್ತದೆ. ಜನಪ್ರಿಯ ನಿರ್ದೇಶಕರೊಟ್ಟಿಗೆ ಕೂತು ರಾಜ್ ಕುಂದ್ರಾ ಚಿತ್ರಕತೆಯನ್ನು ತಯಾರು ಮಾಡಿದ್ದು, ಅವರೇ ಸಿನಿಮಾವನ್ನು ನಿರ್ಮಿಸಿ, ನಟಿಸಲಿದ್ದಾರೆ.