ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸ್ಯನಟ ಕಪಿಲ್ ಶರ್ಮಾ ನಿರ್ವಹಣೆಯ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಈಗ ಮೂರನೇ ಸೀಸನ್ಗೆ ಸಜ್ಜಾಗಿದೆ. ಜೂನ್ 21ರಿಂದ ಪ್ರಾರಂಭವಾಗಲಿರುವ ಈ ಶೋ, ಮೊದಲಿನಂತೆಯೇ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಮೊದಲ ಹಾಗೂ ಎರಡನೇ ಸೀಸನ್ಗಳು ಉತ್ತಮ ಪ್ರತಿಕ್ರಿಯೆ ಪಡೆದಿದ್ದರಿಂದ, ಮೂರನೇ ಅವತರಣಿಕೆಗೆ ನಿರೀಕ್ಷೆ ಗಗನಕ್ಕೇರಿದೆ.
ಈ ಬಾರಿ ಶೋಗೆ ಬಾಲಿವುಡ್ ‘ಭಾಯಿಜಾನ್’ ಸಲ್ಮಾನ್ ಖಾನ್ ಮೊದಲ ಅತಿಥಿಯಾಗಿ ಆಗಮಿಸುತ್ತಿದ್ದು, ಅವರು ನೀಡಿರುವ ಕೆಲ ಹೇಳಿಕೆಗಳು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ವಿಶೇಷವಾಗಿ ಸಂಬಂಧ ಮತ್ತು ವಿಚ್ಛೇದನದ ಬಗ್ಗೆ ಸಲ್ಮಾನ್ ಮಾಡಿರುವ ಕಮೆಂಟ್ಗಳು ಪ್ರೇಕ್ಷಕರಲ್ಲಿ ಚರ್ಚೆಗೆ ಕಾರಣವಾಗಿವೆ.
“ಹಿಂದೆ, ಜನರು ಪರಸ್ಪರ ತ್ಯಾಗ ಮಾಡುತ್ತಿದ್ದರು. ಈಗ, ಜನರು ರಾತ್ರಿಯಲ್ಲಿ ಗೊರಕೆ ಹೊಡೆದರೂ ಸಹ ವಿಚ್ಛೇದನ ಪಡೆಯುತ್ತಾರೆ . ಸಣ್ಣ ತಪ್ಪು ತಿಳುವಳಿಕೆ ಕೂಡ ವಿಚ್ಛೇದನಕ್ಕೆ ಕಾರಣವಾಗುತ್ತದೆ. ಸರಿ, ವಿಚ್ಛೇದನ ಮುಗಿದುಹೋಯಿತು ಮತ್ತು ನಂತರ ಅವಳು ಅರ್ಧದಷ್ಟು ಹಣವನ್ನು ತೆಗೆದುಕೊಂಡು ಹೊರಟು ಹೋಗುತ್ತಾಳೆ” ಎಂದು ತಮ್ಮದೇ ಆದ ಮಾತಿನಲ್ಲಿ ಸಲ್ಮಾನ್ ಹೇಳಿದ್ದಾರೆ. ನವಜೋತ್ ಸಿಂಗ್ ಸಿಧು ಮತ್ತು ಅರ್ಚನಾ ಪುರನ್ ಸಿಂಗ್ ಅವರು ಈ ಮಾತುಗಳಿಗೆ ನಗುತ್ತಿರುವ ದೃಶ್ಯಗಳು ಸಹ ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಈ ಸೀಸನ್ನ ಅತ್ಯಂತ ವಿಶೇಷವೆಂದರೆ ನವಜೋತ್ ಸಿಂಗ್ ಸಿಧು 6 ವರ್ಷಗಳ ನಂತರ ಕಪಿಲ್ ಅವರ ಶೋಗೆ ಮರಳುತ್ತಿದ್ದಾರೆ. ಶೋನ ಹಳೆಯ ತಂಡದ ಸದಸ್ಯರಾದ ಸುನಿಲ್ ಗ್ರೋವರ್, ಕಿಕು ಶಾರದಾ, ಕೃಷ್ಣ ಅಭಿಷೇಕ್ ಮತ್ತು ರಾಜೀವ್ ಠಾಕೂರ್ ಇದ್ದಾರೆ.