ಕುಂಭಮೇಳದಲ್ಲಿ ‘ಪವಿತ್ರ ಸ್ನಾನ’ ಮಾಡಿದ ಬಾಲಿವುಡ್ ಕೊರಿಯೋಗ್ರಾಫರ್ ರೆಮೋ ಡಿಸೋಜಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಖ್ಯಾತ ಬಾಲಿವುಡ್ ಕೊರಿಯೋಗ್ರಾಫರ್ ರೆಮೋ ಡಿಸೋಜಾ ಪವಿತ್ರ ಸ್ನಾನ ಮಾಡಿದ್ದಾರೆ.

ಮಹಾಕುಂಭಮೇಳದಲ್ಲಿ ಬಾಲಿವುಡ್ ನ ಖ್ಯಾತ ನೃತ್ಯ ನಿರ್ದೇಶಕ ರೆಮೋ ಡಿ ಸೋಜಾ ಪಾಲ್ಗೊಂಡಿದ್ದು, ಮಾತ್ರವಲ್ಲದೇ ಪವಿತ್ರ ಸ್ನಾನ ಮಾಡಿದ್ದಾರೆ.

ಮಹಾ ಕುಂಭಮೇಳಕ್ಕೆ ವೇಷ ಧರಿಸಿ ಆಗಮಿಸಿದ ರೆಮೋ ಡಿಸೋಜಾ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಕಪ್ಪು ಬಟ್ಟೆ ಧರಿಸಿ, ಮುಖವನ್ನು ಭಾಗಶಃ ಮುಚ್ಚಿಕೊಂಡು, ಘಾಟ್ ಬಳಿ ನಿಂತು ದೋಣಿ ವಿಹಾರ ಮಾಡಿ, ಪವಿತ್ರ ಆಚರಣೆಯನ್ನು ಮಾಡುತ್ತಿದ್ದ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ.

https://www.instagram.com/reel/DFQTUtXy-Um/?utm_source=ig_embed&utm_campaign=loading

ಮತ್ತೊಂದು ವೀಡಿಯೊದಲ್ಲಿ ರೆಮೋ ಅವರು ಶ್ರೀ ಕೈಲಾಸಾನಂದ ಗಿರಿ ಅವರೊಂದಿಗೆ ಕುಳಿತು ಆಶೀರ್ವಾದ ಪಡೆಯುತ್ತಿರುವುದನ್ನು ತೋರಿಸಲಾಗಿದೆ.

ಇನ್ನು ಈ ಹಿಂದೆ ಇದೇ ನೃತ್ಯ ನಿರ್ದೇಶಕ ರೆಮೋ ಅವರ ಪತ್ನಿ ಲಿಜೆಲ್ಲೆ ಡಿ’ಸೋಜಾ ಅವರಿಗೆ ಕೊಲೆ ಬೆದರಿಕೆಗಳು ಬಂದಿದ್ದವು ಎಂದು ವರದಿಯಾಗಿತ್ತು. ಆದರೆ ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಲಿಜೆಲ್ಲೆ “ನಾವು ಮಾಧ್ಯಮಗಳಲ್ಲಿಯೂ ಇದರ ಬಗ್ಗೆ ಓದಿದ್ದೇವೆ. ನಮ್ಮ ಕಂಪನಿಯ ಇಮೇಲ್ ಐಡಿಯಲ್ಲಿ ಸಂಬಂಧವಿಲ್ಲದ ವಿಷಯದ ಬಗ್ಗೆ ಸ್ಪ್ಯಾಮ್ ಇಮೇಲ್‌ಗಳನ್ನು ಮಾತ್ರ ನಾವು ಸ್ವೀಕರಿಸಿದ್ದೇವೆ, ಅದನ್ನು ನಾವು ಪೊಲೀಸರಿಗೆ ವರದಿ ಮಾಡಿದ್ದೇವೆ. ಸೈಬರ್ ಇಲಾಖೆ ತನಿಖೆ ನಡೆಸುತ್ತಿದೆ ಮತ್ತು ಅವರು ಅದನ್ನು ಸ್ಪ್ಯಾಮ್ ಎಂದು ನಂಬಿದ್ದಾರೆ ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here