ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಪೇರೆಂಟ್ಸ್ ಆಗಿದ್ದಾರೆ, ಹೌದು, ನಿನ್ನೆಯಷ್ಟೇ ಕಿಯಾರಾ ಹಾಗೂ ಸಿದ್ಧಾರ್ಥ್ ಬೇಬಿ ಗರ್ಲ್‌ನ್ನು ವೆಲ್ಕಮ್ ಮಾಡಿಕೊಂಡಿದ್ದಾರೆ.
ಕಿಯಾರಾ ಹಾಸ್ಪಿಟಲ್‌ಗೆ ಆಗಮಿಸಿದ ಫೋಟೊ, ವಿಡಿಯೋಗಳು ಎಲ್ಲೆಡೆ ವೈರಲ್ ಆಗಿತ್ತು. ಅಂತೆಯೇ ನಿನ್ನೆ ತಡರಾತ್ರಿ ಕಿಯಾರಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.
ಕಿಯಾರಾ ಅಡ್ವಾಣಿ ಅವರಿಗೆ ಚಿತ್ರರಂಗದಲ್ಲಿ ಈಗಲೂ ಬೇಡಿಕೆ ಇದೆ. ಸದ್ಯ ಅವರು ಮಗು ಜನಿಸಿದ ಬಳಿಕ ಒಂದು ಗ್ಯಾಪ್ ಪಡೆಯಲಿದ್ದಾರೆ. ಜೂನಿಯರ್ ಎನ್ಟಿಆರ್ ಹಾಗೂ ಹೃತಿಕ್ ರೋಷನ್ ನಟನೆಯ ‘ವಾರ್ 2’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಈ ಚಿತ್ರ ಆಗಸ್ಟ್ 14ರಂದು ತೆರೆಗೆ ಬರಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.