ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಿಣೀತಾ, ಮರ್ದಾನಿ,ಲಾಗ ಚುನರಿ ಮೇ ದಾಗ್, ಹೆಲಿಕಾಪ್ಟರ್ ಇಲಾ ಮುಂತಾದ ಹಿಟ್ ಸಿನಿಮಾಗಳನ್ನು ನೀಡಿದ ಬಾಲಿವುಡ್ ಸ್ಟಾರ್ ಡೈರೆಕ್ಟರ್ ಪ್ರದೀಪ್ ಸರ್ಕಾರ್ ನಿಧನರಾಗಿದ್ದಾರೆ.
67 ವರ್ಷದ ಪ್ರದೀಪ್ ಅವರು ದೀರ್ಘ ಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಪ್ರದೀಪ್ ಸರ್ಕಾರ್ ಕೊನೆಯುಸಿರೆಳೆದಿದ್ದಾರೆ.
ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಜೊತೆ ಪ್ರದೀಪ್ ಸರ್ಕಾರ್ ವೃತ್ತಿ ಜೀವನ ಆರಂಭಿಸಿದರು. ಸಾಕಷ್ಟು ಸಿನಿಮಾ ಹಾಗು ವೆಬ್ ಸೀರೀಸ್ ನಿರ್ದೇಶನವನ್ನು ಮಾಡಿದ್ದು, ಬಾಲಿವುಡ್ ಸೆಲೆಬ್ರಿಟಿಗಳು ನಿಧನಕ್ಕೆ ಸಂತಾಪ ಕೋರುತ್ತಿದ್ದಾರೆ.